HomeKarnatakaಕಾರ್ಮಿಕರ ನಡುವೆ ಗಲಾಟೆ: ಜ್ಯೂಸ್ ಫ್ಯಾಕ್ಟರಿ ಕೆಲಸಗಾರ ಸಾವು: ಇಬ್ಬರು ಅರೆಸ್ಟ್

ಕಾರ್ಮಿಕರ ನಡುವೆ ಗಲಾಟೆ: ಜ್ಯೂಸ್ ಫ್ಯಾಕ್ಟರಿ ಕೆಲಸಗಾರ ಸಾವು: ಇಬ್ಬರು ಅರೆಸ್ಟ್

ಕೋಲಾರ: ಕಾರ್ಮಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕಾರ್ಮಿಕನೊಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಜ್ಯೂಸ್ ಫ್ಯಾಕ್ಟರಿ ಕಾರ್ಮಿಕ ಉಯ್ಯಾದ್ ತಲಾ (24) ಮೃತ ದುರ್ದೈವಿ. ಉತ್ತರ ಪ್ರದೇಶ ಮೂಲದ ಕಾರ್ಮಿಕ ಎಂದು ತಿಳಿದುಬಂದಿದೆ. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಯ್ಯಾದ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.

ಗಲಾಟೆ ಪ್ರಕರಣ ಸಂಬಂಧ ಆರೋಪಿಗಳಾದ ರಾಕೇಶ್ (20) ರವಿ (25) ಎಂಬಾತನನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular