HomeEntertainmentವಿಡಿಯೋ: ತಮಿಳು ಹಿಟ್ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ

ವಿಡಿಯೋ: ತಮಿಳು ಹಿಟ್ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ

ಕೆಲಸದ ಏಕಾತನತೆ ಹೋಗಲಾಡಿಸಲು ಅಪ್‌ಬೀಟ್ ಹಾಡೊಂದಕ್ಕೆ ಸ್ಟೆಪ್ ಹಾಕಿದ ಕೊಚ್ಚಿ ಮೆಟ್ರೋ ಸಿಬ್ಬಂದಿ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದ್ದಾರೆ.

ತಮಿಳು ಹಾಡು ’ಮೈನಾರು ವೆಟ್ಟಿ ಕಟ್ಟಿಗೆ’ಗೆ ಈ ಸಹೋದ್ಯೋಗಿ ಜೋಡಿ ಭಾರೀ ಲವಲವಿಕೆಯಿಂದ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಮೊದಲಿಗೆ ಮಹಿಳಾ ಸಿಬ್ಬಂದಿಯೊಬ್ಬರು ವಿಡಿಯೋದಲ್ಲಿ ಎಂಟ್ರಿ ಕೊಟ್ಟರೆ ಬಳಿಕ ಅವರ ಪುರುಷ ಸಹೋದ್ಯೋಗಿ ಸಹ ಜೊತೆಯಲ್ಲಿ ಹೆಜ್ಜೆ ಹಾಕಲು ಆರಂಭಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಾವು ಯಾವತ್ತೂ ಟ್ರೆಂಡ್‌ ಅನ್ನು ಮಿಸ್ ಮಾಡೋದಿಲ್ಲ,” ಎಂಬ ‌ಕ್ಯಾಪ್ಷನ್‌ನೊಂದಿಗೆ ಕೊಚ್ಚಿ ಮೆಟ್ರೋದ ಇನ್‌ಸ್ಟಾಗ್ರಾಂ ಹ್ಯಾಂಡಲ್ ಈ ವಿಡಿಯೋ ಶೇರ್‌ ಮಾಡಿಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular