HomeHealthಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ....!

ಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ….!

ಮಳೆಗಾಲ ಬಂದಾಯ್ತು. ಬೇಸಿಗೆಯಲ್ಲಿ ಹಸಿ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ಎನ್ನುತ್ತಿದ್ದ ಸಂದೇಶಗಳು ಈಗ ಬೇಯಿಸಿದ ಆಹಾರವನ್ನೇ ಸೇವಿಸಿ ಎಂದು ಬದಲಾಗಬೇಕಿದೆ.

ಹೌದು, ಬೇಸಿಗೆಯಲ್ಲಿ ಹಸಿ ಆಹಾರ ತಿಂದು ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಿ ಎನ್ನಲಾಗುತ್ತಿತ್ತು. ಮಳೆಗಾಲದಲ್ಲಿ ದೇಹ ತಂಪಾಗಿ ಶೀತವಾಗದಂತೆ ತಡೆಗಟ್ಟಲು ಬೆಚ್ಚಗಿನ, ಬೇಯಿಸಿದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೇ ತರಕಾರಿ, ಸೊಪ್ಪು ಅಥವಾ ಮಾಂಸಾಹರವಿರಲಿ ಮಳೆಗಾಲದಲ್ಲಿ ಅದನ್ನು ಸ್ವಚ್ಛವಾಗಿ ತೊಳೆದು ಬೇಯಿಸುವುದು ಬಹಳ ಮುಖ್ಯ. ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿದಷ್ಟೂ ಅದರ ಪೋಷಕಾಂಶಗಳು ನಾಶವಾಗುತ್ತವೆ. ಬಟಾಟೆ, ಗೆಣಸಿನಂಥ ತರಕಾರಿಗಳನ್ನು ಸಿಪ್ಪೆ ಸಮೇತ ಬೇಯಿಸಿ ಬಳಿಕ ಸಿಪ್ಪೆ ತೆಗೆಯುವುದು ಒಳ್ಳೆಯದು.

ಟೊಮೆಟೊ, ಕ್ಯಾರೆಟ್, ಮೂಲಂಗಿ ಮೊದಲಾದ ತರಕಾರಿಗಳಿಗೆ ಬೇಗ ಹಾಳಾಗಬಾರದು ಎಂಬ ಕಾರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿರುತ್ತಾರೆ. ಹಾಗಾಗಿ ಇವುಗಳನ್ನು ಹಸಿಯಾಗಿ ಸೇವಿಸುವುದು ಬೇಡವೇ ಬೇಡ. ಅದರ ಬದಲು ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ನೆನೆಹಾಕಿ, ಬಳಿಕ ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular