HomeLatest Newsಕೊಹ್ಲಿ, ರಾಹುಲ್ ಭರ್ಜರಿ ಶತಕ: ಪಾಕಿಸ್ತಾನ ಗೆಲುವಿಗೆ ಬೃಹತ್ ಮೊತ್ತ

ಕೊಹ್ಲಿ, ರಾಹುಲ್ ಭರ್ಜರಿ ಶತಕ: ಪಾಕಿಸ್ತಾನ ಗೆಲುವಿಗೆ ಬೃಹತ್ ಮೊತ್ತ

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬೃಹತ್ ಮೊತ್ತ ಪೇರಿಸಿದೆ.

ನಿನ್ನೆ ಮಳೆಯಿಂದಾಗಿ ಆಟ ಸ್ಥಗಿತೊಳ್ಳುವ ಮೊದಲು ಭಾರತ 24.1 ಓವರ್ ಗಳಲ್ಲಿ 147 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ರೋಹಿತ್ ಶರ್ಮಾ56, ಶಭಮನ್ ಗಿಲ್ 58, ವಿರಾಟ್ ಕೊಹ್ಲಿ ಅಜೇಯ 8, ಕೆ.ಎಲ್. ರಾಹುಲ್ ಅಜೇಯ 17 ರನ್ ಗಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೀಸಲು ದಿನವಾದ ಇಂದು ಆಟ ಮುಂದುವರೆಸಿದ ಭಾರತದ ಪರ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಭಾರತ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಅಜೇಯ 122, ಕೆ.ಎಲ್. ರಾಹುಲ್ ಅಜೇಯ 111 ರನ್ ಗಳಿಸಿದ್ದಾರೆ. ಪಾಕಿಸ್ತಾನ ಗೆಲುವಿಗೆ 357 ರನ್ ಗುರಿ ನೀಡಲಾಗಿದೆ.

ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 47ನೇ ಶತಕ ಬಾರಿಸಿದ್ದಾರೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಸತತ ನಾಲ್ಕನೇ ಶತಕ ಗಳಿಸಿದ್ದಾರೆ. ಅಲ್ಲದೇ, ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 13 ಸಾವಿರ ರನ್ ಬಾರಿಸಿದ್ದಾರೆ.

278 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 13,024 ರನ್ ಗಳಿಸಿದ್ದಾರೆ. 47 ಶತಕ, 65 ಅರ್ಧ ಶತಕ ಸಿಡಿಸಿದ್ದಾರೆ.

ಕೆ.ಎಲ್. ರಾಹುಲ್ ಅಜೇಯ 111 ರನ್ ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಆರನೇ ಶತಕ ಬಾರಿಸಿದ್ದಾರೆ. 55 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ 2097 ರನ್ ಗಳಿಸಿದ್ದಾರೆ. 6 ಶತಕ, 13 ಅರ್ಧಶತಕ ಬಾರಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular