HomeKarnatakaಕೆಕೆಆರ್‌ಟಿಸಿ ಸೇರಲಿವೆ 56 ನೂತನ ಬಸ್‌ಗಳು

ಕೆಕೆಆರ್‌ಟಿಸಿ ಸೇರಲಿವೆ 56 ನೂತನ ಬಸ್‌ಗಳು

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ 56 ನೂತನ ಬಸ್‌ಗಳು ಶೀಘ್ರವೇ ಸೇರ್ಪಡೆಯಾಗಲಿವೆ. ವಿವಿಧ ನಗರಕ್ಕೆ ಸಂಪರ್ಕ ಕಲ್ಪಿಸಲು ಈ ಬಸ್‌ಗಳು ಸಹಾಯಕವಾಗಲಿವೆ.

ಕೆಕೆಆರ್‌ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್, ಸಾರ್ವಜನಿಕ ಸೇವೆಗೆ ಸೇರ್ಪಡೆಯಾಗಲಿರುವ ಒಟ್ಟು 56 ನೂತನ ಎಸಿ, ನಾನ್-ಎಸಿ ಹಾಗೂ ಸೆಮಿ-ಸ್ಲೀಪರ್ ಬಸ್‌ಗಳನ್ನು  ವೀಕ್ಷಣೆ ಮಾಡಿದರು.

ಈ ಬಸ್‌ಗಳ ನಿರ್ಮಾಣ ಪ್ರಕ್ರಿಯೆ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯ ಬಸ್ ಬಾಡಿ ಬಿಲ್ಡಿಂಗ್ ಘಟಕದಲ್ಲಿ ನಡೆಯುತ್ತಿದೆ. ಅಧಿಕಾರಿಗಳ ಜೊತೆ ಅರುಣ್ ಕುಮಾರ್ ಪಾಟೀಲ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಬಸ್‌ಗಳ ವಿನ್ಯಾಸ, ಒಳಾಂಗಣ ವ್ಯವಸ್ಥೆ, ಪ್ರಯಾಣಿಕರ ಆರಾಮದಾಯಕತೆ, ಸುರಕ್ಷತಾ ಮಾನದಂಡಗಳು ಹಾಗೂ ಗುಣಮಟ್ಟದ ತಾಂತ್ರಿಕ ಅಂಶಗಳ ಕುರಿತು ಸವಿಸ್ತಾರ ಚರ್ಚೆಯನ್ನು ನಡೆಸಿದರು.

ನಿಗದಿತ ಅವಧಿಯಲ್ಲಿ ಉನ್ನತ ಗುಣಮಟ್ಟದ ಕೆಲಸ ಪೂರ್ಣಗೊಳಿಸುವಂತೆ ಕಂಪನಿಯ ಮಾಲೀಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಸ್‌ಗಳು ಆದಷ್ಟು ಬೇಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸೇರ್ಪಡೆಯಾಗಲಿವೆ.

ಪ್ರಯಾಣಿಕರಿಗೆ ಸುರಕ್ಷಿತ, ಉತ್ತಮ, ಆರಾಮದಾಯಕ ಹಾಗೂ ವಿಶ್ವಾಸಾರ್ಹ ಸಾರಿಗೆ ಸೇವೆ ಒದಗಿಸುವುದು ಕೆಕೆಆರ್‌ಟಿಸಿಯ ಪ್ರಮುಖ ಆದ್ಯತೆಯಾಗಿದ್ದು, ಇದರ ಭಾಗವಾಗಿ ಶೀಘ್ರದಲ್ಲೇ ನೂತನ ಬಸ್‌ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೋಘವರ್ಷ ಸ್ಲೀಪರ್ ಬಸ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೆಲವು ದಿನಗಳ ಹಿಂದೆ ಅಫಜಲಪೂರ-ಬೆಂಗಳೂರು ನಡುವೆ ಅಮೋಘವರ್ಷ ಬಸ್ ಸೇವೆಗೆ ಚಾಲನೆ ನೀಡಿದೆ. ಈ ಬಸ್  ಅಫಜಲಪೂರ ಬಿಡುವ ಸಮಯ ಸಾಯಂಕಾಲ 5:45 ಗಂಟೆ ಮತ್ತು ಬೆಂಗಳೂರು ತಲುಪುವ ಸಮಯ ಬೆಳಗೆ 6 ಗಂಟೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಈ ಬಸ್ ಅಫಜಲಪುರ-ಸಿಂಧಗಿ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಸಂಚಾರವನ್ನು ನಡೆಸುತ್ತದೆ. ಅರುಣ್ ಕುಮಾರ್ ಪಾಟೀಲ್ ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಅಫಜಲಪೂರ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular