HomeIPL 2026ಸೋತರೂ, ಗೆದ್ದರೂ ಆರ್‌ಸಿಬಿ ಫ್ಯಾನ್ಸ್ ಹಲ್ಲೆ ಮಾಡ್ತಾರೆ, ಅವರು ಚೆನ್ನೈ ಫ್ಯಾನ್ಸ್ ರೀತಿ ಇಲ್ಲ; ಕೆಕೆಆರ್...

ಸೋತರೂ, ಗೆದ್ದರೂ ಆರ್‌ಸಿಬಿ ಫ್ಯಾನ್ಸ್ ಹಲ್ಲೆ ಮಾಡ್ತಾರೆ, ಅವರು ಚೆನ್ನೈ ಫ್ಯಾನ್ಸ್ ರೀತಿ ಇಲ್ಲ; ಕೆಕೆಆರ್ ಫ್ಯಾನ್ ಗಂಭೀರ ಆರೋಪ

ನಿನ್ನೆ ( ಏಪ್ರಿಲ್ 14 ) ಚೆನ್ನೈನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 22ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 32 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ ಹಾಗೂ ಡಿವಾಲ್ಡ್ ಬ್ರೆವಿಸ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿದೆ.

ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಜಯ ಸಾಧಿಸಿದ್ದು, ಲಯಕ್ಕೆ ಮರಳಿದಂತಿದೆ. ಆದರೆ ಈ ಪಂದ್ಯವೂ ಸೇರಿದಂತೆ ಟೂರ್ನಿಯಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಖಾತೆ ತೆರೆಯಲಾಗದೇ ಹೀನಾಯ ಪರಿಸ್ಥಿತಿ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಹೀನಾಯ ಸೋಲು ಕಂಡ ಕೊಲ್ಕತ್ತಾ ನೈಟ್ ರೈಡರ್ಸ್ ಕಂಗಾಲಾಗಿದ್ದರೆ, ಅವರ ಅಭಿಮಾನಿಗಳು ಚೆನ್ನೈನ ಚೆಪಾಕ್‌ನಿಂದ ಹೊರಬರುವಾಗ ತಂಡದಲ್ಲಿ ಬದಲಾವಣೆಗಳಾಗಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಕೆಕೆಆರ್ ಅಭಿಮಾನಿಯೋರ್ವ ಚೆಪಾಕ್ ಕ್ರೀಡಾಂಗಣದಲ್ಲಿ ನಮ್ಮ ತಂಡ ಸೋತರೆ ಇಲ್ಲಿನ ಅಭಿಮಾನಿಗಳು ಕಮ್‌ಬ್ಯಾಕ್ ಮಾಡಿ ಎಂದು ಶುಭ ಹಾರೈಸುತ್ತಾರೆ, ಆದರೆ ಬೆಂಗಳೂರಿನಲ್ಲಿ ಇದಕ್ಕೆ ವಿರುದ್ಧ, ಅಲ್ಲಿ ಸೋತರೂ, ಗೆದ್ದರೂ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ ಹಾಗೂ ಹಲ್ಲೆ ಮಾಡುತ್ತಾರೆ ಎಂದಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular