HomeLatest Newsಅಡುಗೆಮನೆಯಲ್ಲಿ ಸೂಪರ್ ಕ್ವೀನ್ ಆಗಬೇಕೇ? ಅಡುಗೆಮನೆಯ ಕೆಲಸವನ್ನು 10 ಪಟ್ಟು ಸುಲಭವಾಗಿಸುವ ಮಸ್ತ್ ಟಿಪ್ಸ್ ಇಲ್ಲಿವೆ

ಅಡುಗೆಮನೆಯಲ್ಲಿ ಸೂಪರ್ ಕ್ವೀನ್ ಆಗಬೇಕೇ? ಅಡುಗೆಮನೆಯ ಕೆಲಸವನ್ನು 10 ಪಟ್ಟು ಸುಲಭವಾಗಿಸುವ ಮಸ್ತ್ ಟಿಪ್ಸ್ ಇಲ್ಲಿವೆ

ಬೆಂಗಳೂರು: ಅಡುಗೆ ಮನೆ ಎನ್ನುವುದು ಕೇವಲ ರುಚಿಯ ತಾಣವಲ್ಲ, ಅದೊಂದು ಕಲೆ. ಅದರಲ್ಲೂ ಹೊಸದಾಗಿ ಸಂಸಾರ ಹೂಡಿದವರಿಗೆ ಅಥವಾ ಬ್ಯಾಚುಲರ್‌ಗಳಿಗೆ ಅಡುಗೆ ಮನೆಯ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡ ತಲೆನೋವಾಗಿ ಪರಿಣಮಿಸುವುದು ಸಹಜ. ದೋಸೆ ಸರಿಯಾಗಿ ಏಳದಿದ್ದರೆ ಅಥವಾ ಈರುಳ್ಳಿ ಹೆಚ್ಚುವಾಗ ಕಣ್ಣೀರು ಬಂದರೆ ಅಡುಗೆಯ ಉತ್ಸಾಹವೇ ಆರಿಹೋಗುತ್ತದೆ. ಆದರೆ ಚಿಂತಿಸಬೇಡಿ ನಿಮ್ಮ ಅಡುಗೆಮನೆಯ ಕೆಲಸವನ್ನ ಸ್ಮಾರ್ಟ್ ಆಗಿ ಮಾಡೋಕೆ ಇಲ್ಲಿದೆ ನೋಡಿ ಕೆಲವು ಪವರ್‌ಫುಲ್ ಟಿಪ್ಸ್

ರುಚಿ ಮತ್ತು ಮೃದುತ್ವಕ್ಕೆ ಇಲ್ಲಿವೆ ಸೀಕ್ರೆಟ್ಸ್:

ಚಪಾತಿ ಇನ್ನು ಹತ್ತಿಯಂತೆ: ಒಂದು ಪಾವು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಬ್ರೆಡ್ಡಿನ ಬಿಳಿಭಾಗದ ಪುಡಿಯನ್ನು ಮಿಕ್ಸಿ ಮಾಡಿ ಬೆರೆಸಿ ಕಲೆಸಿದರೆ, ಚಪಾತಿ ಅಚ್ಚರಿಯ ರೀತಿಯಲ್ಲಿ ಮೃದುವಾಗಿ ಬರುತ್ತದೆ.

ಸ್ಪೆಷಲ್ ಟೀ ಟೇಸ್ಟ್: ಪ್ರತಿದಿನ ಒಂದೇ ರೀತಿಯ ಟೀ ಕುಡಿದು ಬೇಸರವಾಗಿದ್ದರೆ, ಟೀ ಮಾಡುವಾಗ ಕಿತ್ತಳೆ ಸಿಪ್ಪೆ, ಹಸಿ ಶುಂಠಿ ಅಥವಾ ತುಳಸಿ ಎಲೆಗಳನ್ನು ಒಂದೊಂದು ದಿನ ಒಂದೊಂದನ್ನು ಬಳಸಿ ನೋಡಿ. ಇದು ರುಚಿಯ ಜೊತೆಗೆ ಆರೋಗ್ಯವನ್ನೂ ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಳೆಹಣ್ಣಿನ ರಸಾಯನ: ರಸಾಯನ ಮಾಡುವಾಗ ಅರ್ಧ ಚಮಚ ತುಪ್ಪ ಸೇರಿಸಿದರೆ ಹಣ್ಣು ಕಪ್ಪಾಗುವುದಿಲ್ಲ ಮತ್ತು ರುಚಿ ಅದ್ಭುತವಾಗಿರುತ್ತದೆ.

ಕೆಲಸ ಸುಲಭವಾಗಿಸುವ ಸ್ಮಾರ್ಟ್ ಐಡಿಯಾಗಳು:

ಈರುಳ್ಳಿ ಹೆಚ್ಚುವಾಗ ಕಣ್ಣೀರು ಸುರಿಯುವುದನ್ನು ತಡೆಯಲು ಸರಳ ಉಪಾಯವೆಂದರೆ ಕನ್ನಡಕ ಧರಿಸುವುದು

ಮೆಣಸಿನಕಾಯಿ ಹೆಚ್ಚಿದ ನಂತರ ಕೈ ಉರಿಯುತ್ತಿದ್ದರೆ, ಕೈಗೆ ಸ್ವಲ್ಪ ಎಣ್ಣೆ ಹಚ್ಚಿ ಪೇಪರ್‌ನಿಂದ ಒರೆಸಿ, ನಂತರ ಸಾಬೂನಿನಿಂದ ತೊಳೆದರೆ ಖಾರ ಮಾಯವಾಗುತ್ತದೆ.

ಕಬ್ಬಿಣದ ತವ ಅಥವಾ ಬಾಣಲೆಯನ್ನು ತೊಳೆದ ನಂತರ ಸ್ವಲ್ಪ ಎಣ್ಣೆ ಹಚ್ಚಿ ಇಡಿ. ದೋಸೆ ಹಾಕುವ ಮುನ್ನ ತವದ ಮೇಲೆ ಒಂದು ಚಿಟಿಕೆ ಉಪ್ಪು ಹಾಕಿ ಉಜ್ಜಿದರೆ, ದೋಸೆ ಹರಿಯದಂತೆ ಸಲೀಸಾಗಿ ಬರುತ್ತದೆ.

ಬಾಳೆಹಣ್ಣು ಫ್ರೆಶ್ ಆಗಿರಲು: ಬಾಳೆಹಣ್ಣಿನ ಚಿಪ್ಪನ್ನು ದಾರದಿಂದ ಕಟ್ಟಿ ನೇತುಹಾಕಿದರೆ ಹಣ್ಣಿನ ಕೆಳಭಾಗ ಕಪ್ಪಾಗದೆ ದೀರ್ಘಕಾಲ ಚೆನ್ನಾಗಿರುತ್ತದೆ.

ಲೈಟರ್‌ಗಳ ಬಳಕೆ: ಮನೆಯಲ್ಲಿ ಮೂರ್ನಾಲ್ಕು ಲೈಟರ್‌ಗಳಿದ್ದರೆ ಅವುಗಳನ್ನು ಬದಲಾಯಿಸುತ್ತಾ ಬಳಸಿ, ಆಗ ಎಲ್ಲವೂ ದೀರ್ಘಕಾಲ ಬಾಳಿಕೆ ಬರುತ್ತವೆ.

ಸ್ವಚ್ಛತೆಗೆ ಆದ್ಯತೆ: ಅಡುಗೆ ಮನೆಯ ಸಿಂಕ್ ಹತ್ತಿರ ಒಂದು ಹಳೆಯ ಟೂತ್ ಬ್ರಷ್ ಇಡಿ. ನಕಾಸೆ ಇರುವ ಅಥವಾ ಸಣ್ಣ ಸಂದಿರುವ ಪಾತ್ರೆಗಳನ್ನು ತೊಳೆಯಲು ಇದು ವರದಾನ.

ಪೊರಕೆಗಳ ಸುರಕ್ಷತೆ: ಮನೆ ಗುಡಿಸುವ ಪೊರಕೆಗಳನ್ನು ನೆಲದ ಮೇಲೆ ಇಡದೆ, ದಾರದ ಕುಣಿಕೆ ಹಾಕಿ ನೇತುಹಾಕಿದರೆ ಕಡ್ಡಿಗಳು ಹಾಳಾಗುವುದಿಲ್ಲ.

ಬೆಳ್ಳುಳ್ಳಿ ಸಿಪ್ಪೆ ಸುಲಿಯೋದು ಅಂದ್ರೆ ಅಬ್ಬಾ ದೊಡ್ಡ ತಲೆನೋವು ಅಲ್ವಾ? ಇನ್ಮೇಲೆ ಬೆಳ್ಳುಳ್ಳಿನ ಸ್ವಲ್ಪ ಬಿಸಿ ಮಾಡಿ ಆಮೇಲೆ ಸಿಪ್ಪೆ ಸುಲಿಯಿರಿ. ಸಿಪ್ಪೆ ಸಲೀಸಾಗಿ ಕೈಗೆ ಬರುತ್ತೆ

ಒಗ್ಗರಣೆಯಲ್ಲಿ ತರಕಾರಿ ತಾಳಿಸುವಾಗ ಒಂದು ಸಣ್ಣ ಟ್ರಿಕ್ ಇದೆ. ತರಕಾರಿ ಎಣ್ಣೆಗೆ ಹಾಕುವ ಮೊದಲೇ ಸ್ವಲ್ಪ ಅರಿಷಿಣ ಹಾಕಿಬಿಡಿ. ಹೀಗೆ ಮಾಡಿದ್ರೆ ತರಕಾರಿಗಳು ತಮ್ಮ ನೈಜ ಬಣ್ಣವನ್ನ ಕಳೆದುಕೊಳ್ಳೋದಿಲ್ಲ, ನೋಡೋಕೆ ಸಖತ್ ಆಗಿ ಕಾಣುತ್ತೆ

ಫ್ರಿಜ್ಜಲ್ಲಿ ಇಟ್ರೂ ನಿಂಬೆಹಣ್ಣು ಒಣಗಿ ಹೋಗುತ್ತಾ? ಹಾಗಾದ್ರೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ನಿಂಬೆಹಣ್ಣುಗಳನ್ನ ಇಡಿ. ವಾರಗಳ ಕಾಲ ಅವು ತಾಜಾ ಆಗಿರುತ್ತವೆ.

ಅಡುಗೆ ಮಾಡುವಾಗ ಮರೆತು ಪಾತ್ರೆ ತಳ ಹತ್ತಿ ಕರಕಲಾಗಿದ್ಯಾ? ಗಾಬರಿ ಆಗ್ಬೇಡಿ ಬಾಸ್! ಆ ಪಾತ್ರೆಗೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ 5 ನಿಮಿಷ ಬಿಡಿ. ಇಲ್ಲಾಂದ್ರೆ ಬಿಸಿನೀರಲ್ಲಿ ಸ್ವಲ್ಪ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಅದರಲ್ಲಿ ಸುರಿದು 5-6 ನಿಮಿಷ ಬಿಟ್ಟು ತೊಳೆಯಿರಿ. ನಿಮ್ಮ ಪಾತ್ರೆ ಲಕಲಕ ಅಂತ ಹೊಸದರಂತೆ ಮಿಂಚುತ್ತೆ

ಈ ಚಿಕ್ಕ ಪುಟ್ಟ ಬದಲಾವಣೆಗಳು ನಿಮ್ಮ ಅಡುಗೆ ಮನೆಯ ಕೆಲಸವನ್ನು ಸ್ಮಾರ್ಟ್ ಆಗಿಸುವುದಲ್ಲದೆ, ಸಮಯವನ್ನೂ ಉಳಿಸುತ್ತವೆ. ಇಂದೇ ಇವುಗಳನ್ನು ಪ್ರಯತ್ನಿಸಿ ಮತ್ತು ನಿಮ್ಮ ಅಡುಗೆಮನೆಯ ಮಾಸ್ಟರ್ ಆಗಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular