HomeLatest Newsಬೇಳೆಕಾಳಿನಲ್ಲಿ ಹುಳು ಆಗ್ತಿದ್ಯಾ....? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಬೇಳೆಕಾಳಿನಲ್ಲಿ ಹುಳು ಆಗ್ತಿದ್ಯಾ….? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಚಳಿಗಾಲ ಇರಲಿ ಇಲ್ಲ ಮಳೆಗಾಲ ಇರಲಿ, ನಿಮ್ಮ ಮನೆಯಲ್ಲಿರುವ ಕೆಲ ಆಹಾರ ಪದಾರ್ಥಗಳು ಬೇಗ ಹಾಳಾಗುತ್ತವೆ. ಅವುಗಳಲ್ಲಿ ಹುಳ ಕಾಣಿಸಿಕೊಳ್ಳುತ್ತದೆ. ಹುಳ ಹಿಡಿದ ಅಕ್ಕಿ, ಬೇಳೆಕಾಳುಗಳನ್ನು ಮತ್ತೆ ಬಳಸಲು ಬರೋದಿಲ್ಲ. ಒಂದ್ವೇಳೆ ನೀವು ಅದನ್ನು ಬಳಸಿದ್ರೂ ಅದ್ರಲ್ಲಿ ಪೌಷ್ಠಿಕಾಂಶ ಇರೋದಿಲ್ಲ. ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ಬಹುತೇಕ ಬೇಳೆಗಳಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವೊಂದು ಸುಲಭ ಉಪಾಯಗಳನ್ನು ಪಾಲನೆ ಮಾಡುವ ಮೂಲಕ ಈ ಹುಳು ಸಮಸ್ಯೆಯಿಂದ ಮುಕ್ತಿಪಡೆಯಬಹುದು.

ನಿಮ್ಮ ಮನೆಯಲ್ಲಿರುವ ಧಾನ್ಯಗಳನ್ನು ನೀವು ಏರ್‌ ಟೈಟ್‌ ಡಬ್ಬದಲ್ಲಿ ಹಾಕಿಡಬೇಕು. ಡಬ್ಬದ ಮುಚ್ಚಳ ಸಡಿಲವಾಗಿದ್ದರೆ ಗಾಳಿ ಅದರಲ್ಲಿ ಸೇರಿ ಅದು ಹಾಳಾಗುತ್ತದೆ. ಅದ್ರಲ್ಲಿ ಹುಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೀವು ಗಾಳಿಯಾಡದ ಡಬ್ಬದಲ್ಲಿ ಇವುಗಳನ್ನು ಇಡಿ. ಜೊತೆಗೆ ಪ್ರತಿ ಬಾರಿ ಬಳಸಿದ ನಂತರವೂ ಮುಚ್ಚಳವನ್ನು ಬಿಗಿಯಾಗಿ ಹಾಕಿ.

ಲವಂಗದ ಎಲೆಗಳು ಸುವಾಸನೆಯಿಂದ ಕೂಡಿರುತ್ತವೆ. ಅವುಗಳನ್ನು ನೀವು ಬೇಳೆಕಾಳು ತುಂಬಿದ ಡಬ್ಬದಲ್ಲಿ ಹಾಕಿಟ್ಟರೆ ಅದರಲ್ಲಿ ಹುಳು ಬೆಳೆಯುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಸರುಬೇಳೆ, ಉದ್ದಿನ ಬೇಳೆ, ಕಡಲೆ ಬೇಳೆಯಂತಹ ಪದಾರ್ಥಗಳ ಡಬ್ಬಕ್ಕೆ ನೀವು ಬೆಳ್ಳುಳ್ಳಿ ಎಸಳನ್ನು ಹಾಕಿಡಿ. ಬೆಳ್ಳುಳ್ಳಿ ವಾಸನೆಗೆ ಹುಳುಗಳು ಆಕರ್ಷಿತವಾಗುವುದಿಲ್ಲ. ಇದಲ್ಲದೆ ನೀವು ಒಣಗಿನ ಮೆಣಸಿನಕಾಯಿಯನ್ನು ಬೇಳೆಗಳಿರುವ ಡಬ್ಬಕ್ಕೆ ಹಾಕಿ ಇಡಬಹುದು. ಒಣ ಮೆಣಸಿನಕಾಯಿ ನಿಮ್ಮ ಪದಾರ್ಥಗಳನ್ನು ಹುಳುಗಳಿಂದ ರಕ್ಷಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular