HomeAutoಇವಿ ಬಳಕೆ ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಹೊಸ ಡೀಲರ್‌ ಶಿಪ್ ಉದ್ಘಾಟಿಸಿದ ಕೈನೆಟಿಕ್ ಗ್ರೀನ್

ಇವಿ ಬಳಕೆ ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಹೊಸ ಡೀಲರ್‌ ಶಿಪ್ ಉದ್ಘಾಟಿಸಿದ ಕೈನೆಟಿಕ್ ಗ್ರೀನ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಲಿಮಿಟೆಡ್ ಸೊಲ್ಯೂಷನ್ಸ್ ಮೈಸೂರಿನಲ್ಲಿ ಹೊಸ ಡೀಲರ್‌ ಶಿಪ್ ಉದ್ಘಾಟನೆ ಮಾಡಿದೆ. ಶ್ರೀ ಮಂಗೀಲಾಲ್ ಪದಮ್ ಚಂದ್ ಅವರು ಹಿಂದೂಸ್ತಾನ್ ಎಂಟರ್‌ ಪ್ರೈಸಸ್ ಗ್ರೀನ್ ಎಂಬ ಹೆಸರಿನ ಈ ಡೀಲರ್‌ ಶಿಪ್ ನ ಮಾಲೀಕತ್ವ ಹೊಂದಿದ್ದಾರೆ. ಈ ಹೊಸ ಡೀಲರ್ ಶಿಪ್ ಉದ್ಘಾಟನೆಯು ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಕಂಪನಿಯ ಬದ್ಧತೆಗೆ ಪೂರಕವಾಗಿ ಜರುಗಿದೆ.

ಕೈನೆಟಿಕ್ ಗ್ರೀನ್‌ ನ 2 ವೀಲರ್ಸ್ ವಿಭಾಗದ ಅಧ್ಯಕ್ಷ ಪಂಕಜ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಅವರು, ಹವಾಮಾನ ಬದಲಾವಣೆ ಸಮಸ್ಯೆ ಮತ್ತು ಮಾಲಿನ್ಯ ನಿವಾರಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ವಹಿಸುವ ಪ್ರಮುಖ ಪಾತ್ರದ ಕುರಿತು ಚರ್ಚೆ ನಡೆಸಿದರು. ಜೊತೆಗೆ ಸುಸ್ಥಿರ ಭವಿಷ್ಯ ಸಾಧಿಸುವ ನಿಟ್ಟಿನಲ್ಲಿ ಅವುಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ವ್ಯಾಪಕವಾಗಿ ಅಳವಡಿಸುವ ಅಗತ್ಯದ ಕುರಿತು ತಿಳಿಸಿದರು.

ಮೈಸೂರಿನಲ್ಲಿರುವ ಕೈನೆಟಿಕ್ ಗ್ರೀನ್‌ ನ ಹೊಸ ಡೀಲರ್‌ಶಿಪ್ ವಿಶಾಲವಾದ ಜಾಗವನ್ನು ಹೊಂದಿದ್ದು, ಅಲ್ಲಿ ಸರ್ವೀಸ್ ಗಾಗಿ ಉತ್ತಮ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಇ-ಲೂನಾ, ಇ- ಜುಲು ಮತ್ತು ಇ- ಜಿಂಗ್ ಮುಂತಾದ ಕೈನೆಟಿಕ್ ಗ್ರೀನ್‌ ನ ವೈವಿಧ್ಯಮಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಡೀಲರ್‌ ಶಿಪ್ ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಮಾಡೆಲ್ ಗಳನ್ನು ಸುಸ್ಥಿರತಾ ಕ್ರಮಗಳಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾಗಿದ್ದು, ಆಕರ್ಷಕ, ಗಮನಾರ್ಹ ಮತ್ತು ಮನಸೆಳೆಯುವ ವಿನ್ಯಾಸಗಳನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular