ಮಕ್ಕಳಿಗೆ ಇಷ್ಟವಾಗುತ್ತೆ ರುಚಿಯಾದ ʼಮಟ್ಕಾ ಕುಲ್ಫಿʼ

ಬೇಸಿಗೆ ಕಾಲವಾದ್ದರಿಂದ ನಾನಾ ಬಗೆಯ ಐಸ್ ಕ್ರೀಂ ಮನೆಯಲ್ಲಿ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಒಮ್ಮೆ ಈ ಮಟ್ಕಾ ಕುಲ್ಫಿ ಕೂಡ ಮಾಡಿ ಸವಿಯಿರಿ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ.

ಬೇಕಾಗುವ ಸಾಮಗ್ರಿಗಳು:

3 ಕಪ್ ಹಾಲು, 1 ಕಪ್-ಕ್ರೀಂ, 2 ಟೇಬಲ್ ಸ್ಪೂನ್-ಹಾಲಿನ ಪುಡಿ, 2 ಟೇಬಲ್ ಸ್ಪೂನ್ ಬಾದಾಮಿ ಪೀಸ್, ¼ ಟೀ ಸ್ಪೂನ್ ಕೇಸರಿ ದಳ, 2 ಟೇಬಲ್ ಸ್ಪೂನ್-ಪಿಸ್ತಾ, 2 ಟೇಬಲ್ ಸ್ಪೂನ್-ಗೋಡಂಬಿ ಚೂರುಗಳು, ¼ ಕಪ್- ಸಕ್ಕರೆ.

ಮಾಡುವ ವಿಧಾನ:

ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಹಾಲು, ಕ್ರೀಂ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹಾಲಿನ ಪುಡಿ ಹಾಕಿ ಕೈಯಾಡಿಸಿ. ಹಾಲು ಚೆನ್ನಾಗಿ ಕುದಿಯಲಿ.

ನಂತರ ಇದಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ, ಕೇಸರಿ ದಳ ಸೇರಿಸಿ ಹಾಲನ್ನು ಕುದಿಸಿ. ಹಾಲು ದಪ್ಪಗಾದ ಮೇಲೆ ಸಕ್ಕರೆ ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ.

ಈ ಮಿಶ್ರಣ ತಣ್ಣಗಾಗಲಿ. ನಂತರ ಚಿಕ್ಕ ಚಿಕ್ಕ ಮಟ್ಕಾಕ್ಕೆ ಇದನ್ನು ಹಾಕಿ ಅಲ್ಯುಮಿನಿಯಂ ಫಾಯಿಲ್ ನಿಂದ ಮಟ್ಕಾದ ಮೇಲುಭಾಗ ಮುಚ್ಚಿ ಫ್ರೀಜರ್ ನಲ್ಲಿ 8 ಗಂಟೆಗಳ ಕಾಲ ಇಡಿ. ನಂತರ ಸವಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read