ಬಾಲಿವುಡ್ನ ಬೇಡಿಕೆಯ ನಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಜುಲೈ 31ರಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸುಖಿ ದಾಂಪತ್ಯ ನಡೆಸುತ್ತಿರುವ ಕಿಯಾರಾ ಇತ್ತೀಚೆಗಷ್ಟೇ ತಾಯಂದಿರ ಬಳಗಕ್ಕೆ ಸೇರ್ಪಡೆಯಾಗಿದ್ದು, ಹುಟ್ಟುಹಬ್ಬದ ಈ ವಿಶೇಷ ದಿನದಂದು ಈ ಸ್ಟಾರ್ ಜೋಡಿಯ ಆಸ್ತಿ ಮೌಲ್ಯ ಹಾಗೂ ಐಷಾರಾಮಿ ಜೀವನಶೈಲಿಯ ವಿವರಗಳು ಭಾರಿ ಸದ್ದು ಮಾಡುತ್ತಿವೆ.
ಗೀತು ಮೋಹನ್ ದಾಸ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಮೂಲಕ ಕಿಯಾರಾ ಅಡ್ವಾಣಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅವರು ನಾಡಿಯಾ ಎಂಬ ಪ್ರಮುಖ ಹಾಗೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಯಶ್-ಕಿಯಾರಾ ಜೋಡಿಯನ್ನು ಬೆಳ್ಳಿಪರದೆ ಮೇಲೆ ನೋಡಲು ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದೆ.
ಕಿಯಾರಾ ಅಡ್ವಾಣಿ ಆಸ್ತಿ ಮೌಲ್ಯ
ವರದಿಗಳ ಪ್ರಕಾರ, ನಟಿ ಕಿಯಾರಾ ಅಡ್ವಾಣಿ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹40 ಕೋಟಿ ಎಂದು ಅಂದಾಜಿಸಲಾಗಿದೆ. ಅವರು ಪ್ರತಿ ಸಿನಿಮಾಗೆ ಅಂದಾಜು ₹3 ಕೋಟಿ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಪ್ರಮುಖ ಬ್ರ್ಯಾಂಡ್ಗಳ ರಾಯಭಾರಿಯಾಗಿ ಮಿಂಚುತ್ತಿರುವ ಅವರು, ಪ್ರತಿ ಜಾಹೀರಾತಿನಿಂದ ₹1.5 ಕೋಟಿ ಸಂಪಾದಿಸುತ್ತಾರೆ. ಕಿಯಾರಾ ಬಳಿ ಬಿಎಂಡಬ್ಲ್ಯೂ ಎಕ್ಸ್5, ಆಡಿ ಎ8ಎಲ್ ಹಾಗೂ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ನಂತಹ ಐಷಾರಾಮಿ ಕಾರುಗಳಿವೆ.
ಸಿದ್ಧಾರ್ಥ್ ಮಲ್ಹೋತ್ರಾ ಆಸ್ತಿ ವಿವರ
ಬಾಲಿವುಡ್ನ ಮತ್ತೊಬ್ಬ ಜನಪ್ರಿಯ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ ₹105 ಕೋಟಿ ಆಗಿದೆ. ಇವರು ಪ್ರತಿ ಚಿತ್ರಕ್ಕೆ ₹15 ರಿಂದ ₹20 ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ. ಕೊಕಕೋಲಾ, ಪೆಪೆ ಜೀನ್ಸ್ನಂತಹ ಟಾಪ್ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ ಇವರು, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಮರ್ಸಿಡಿಸ್ ಮೇಬ್ಯಾಕ್ ಎಸ್500 ನಂತಹ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ.
2023ರ ಫೆಬ್ರವರಿಯಲ್ಲಿ ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಒಟ್ಟು ಜಂಟಿ ಆಸ್ತಿ ಮೌಲ್ಯ ₹145 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಿವುಡ್ನ ಅತ್ಯಂತ ಪ್ರೀತಿಪಾತ್ರ ಹಾಗೂ ಶ್ರೀಮಂತ ದಂಪತಿಗಳಲ್ಲಿ ಈ ಜೋಡಿಯೂ ಒಂದಾಗಿದೆ.

