HomeKarnatakaBIG NEWS: ಏರ್ ಪೋರ್ಟ್ ಸುತ್ತಮುತ್ತ ದಟ್ಟ ಮಂಜು: ಕೆಐಎಯಲ್ಲಿ 34 ವಿಮಾನ ಹಾರಾಟದಲ್ಲಿ ವ್ಯತ್ಯಯ

BIG NEWS: ಏರ್ ಪೋರ್ಟ್ ಸುತ್ತಮುತ್ತ ದಟ್ಟ ಮಂಜು: ಕೆಐಎಯಲ್ಲಿ 34 ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು: ಹವಾಮಾನ ವೈಫರಿತ್ಯದಿಂದಾಗಿ ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾಗಿದೆ.

ದಟ್ಟವಾದ ಮಂಜು, ಮೋಡಕವಿದ ವಾತಾವರಣದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸುಮಾರು 34 ವಿಮಾನಗಳ ಹಾರಾಟ ತಡವಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟ ಮಂಜು ಕವಿದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಗಂಟೆಗೂ ಹೆಚ್ಚು ಕಾಲದಿಂದ ಯಾವುದೇ ವಿಮಾನ ಟೇಕ್ ಆಫ್ ಆಗಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಜು ಮುಸುಕಿರುವ ಹಿನ್ನೆಲೆಯಲ್ಲಿ ರನ್ ವೇ ಸರಿಯಾಗಿ ಕಾಣುತ್ತಿಲ್ಲ. ಹವಾಮಾನ ವೈಫರಿತ್ಯ ಕಾರಣಕ್ಕೆ 34 ವಿಮಾನ ಹಾರಾಟ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular