HomeKarnatakaಕುಮಾರಸ್ವಾಮಿ 3Bಗೆ ಫೇಮಸ್: ನಾವು KGF- 2 ಬಿಡುಗಡೆ ಮಾಡುತ್ತೇವೆ: ಸಚಿವ ಬಾಲಕೃಷ್ಣ ವಾಗ್ದಾಳಿ

ಕುಮಾರಸ್ವಾಮಿ 3Bಗೆ ಫೇಮಸ್: ನಾವು KGF- 2 ಬಿಡುಗಡೆ ಮಾಡುತ್ತೇವೆ: ಸಚಿವ ಬಾಲಕೃಷ್ಣ ವಾಗ್ದಾಳಿ

ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಳಿ ನಡೆಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಕೈಯಲ್ಲಿ ಅಧಿಕಾರವಿದೆ. ಅದನ್ನು ರಾಜ್ಯಕ್ಕೆ ಒಳಿತಾಗುವ ಸಾಕಷ್ಟು ಕೆಲಸಗಳನ್ನು ಮಾಡುವುದನ್ನು ಬಿಟ್ಟು ಅನಗತ್ಯವಾಗಿ ಆರೋಪಗಳನ್ನು ಮಾಡು ಕಾಲ ಹರಣ ಮಡುತ್ತಿದ್ದಾರೆ. ಮಾಡುವ ಕೆಲಸಗಳನ್ನು ಬಿಟ್ಟು ಈ ರೀತಿ ಮುಖ್ಯಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಯಾಕೆ ಮಾಡುತ್ತಿದ್ದಾರೆ? ಎಂಬುದು ಗೊತ್ತಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿ ಅವರು 3Bಗೆ ಫೇಮಸ್. 3B ಎಂದರೆ ಬ್ಲ್ಯಾಕ್ ಮೇಲರ್, ಬ್ಲ್ಯಾಕ್ ಸ್ಟ್ಯಾಬರ್, ಬ್ಲ್ಯಾಕ್ ಮ್ಯಾಜಿಕ್ ಇವುಗಳಿಗೆ ಹೆಸರಾದವರು. ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಭೂಕಬಳಿಕೆ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇಂತದ್ದನ್ನೆಲ್ಲ ಬಿಟ್ಟು ಕೇಂದ್ರದ ಮಂತ್ರಿಯಾದವರು ರಾಜ್ಯಕ್ಕೆ ಒಳಿತಾಗುವ ಕೆಲಸ ಮಾಡಲಿ. ಮಂತ್ರಿಯಾಗಿ ಅವರ ಕೆಲಸ ಮಾಡುವುದನ್ನು ಬಿಟ್ತು ಬರಿ ಡಿ.ಕೆ.ಶಿವಕುಮಾರ್ ಬಗ್ಗೆ ಆರೋಪ ಮಾಡುವುದಲ್ಲಿ ಕಾಲ ಕಳೆಯುತ್ತಿದ್ದಾರೆ. ಈವರೆಗೆ ಎಷ್ಟು ಬಾರಿ ಕರ್ನಾಟಕದ ಬಗ್ಗೆ ಮಾಅತನಾಡಿದ್ದಾರೆ? ಎಷ್ಟು ಬಗ್ಗೆ ಸಿಎಂ ಬಗ್ಗೆ ಮಾತನಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದರು.

ಈ ಹಿಂದೆ ಚೆನ್ನಮ್ಮ ಅವರಿಗೂ ಐಟಿ ನೋಟಿಸ್ ಹೋಗಿತ್ತು. ಈ ಬಗ್ಗೆ ನೆನಪಿರಲಿ. ಕುಮಾರಸ್ವಾಮಿ ಇದೇ ರೀತಿ ಮುಂದುವರೆದರೆ ನಾವೂ ಕೂಡ KGF- 2 ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿಲ್ಲ. ಈಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ದಿನಕ್ಕೊಂದು ಮಾತುಗಳನ್ನು ಆಡುತ್ತಾ ಆರೋಪ ಮಾಡುತ್ತಿದ್ದಾರೆ. ಅವರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದು ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ LKGಯಲ್ಲಿದ್ದಾರೆ; ನಾನು ಪಿ ಹೆಚ್ ಡಿ ಮಾಡಿದ್ದೇನೆ: ಕಿಡಿಗೇಡಿಗಳಂತೆ ವರ್ತಿಸುವುದು ಸರಿಯಲ್ಲ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಶಿವಮೊಗ್ಗ: 2028ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಭರತ್ ಜೋಡೋ-೨ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿದೆ.

ಕಮಲ ಕೋಟೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಿಂದಲೇ ಭಾರತ್ ಜೋಡೋ-೨ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಸೇವಾದಳದ ಬಾವುಟ ಹಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಮ್ಮ ಬಾವುಟ, ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ. ಕಿಡಿಗೇಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ಎಲ್ ಕೆಜಿಯಲ್ಲಿದ್ದಾರೆ. ನಾನು ಪಿಹೆಚ್ ಡಿ ಮಾಡಿದ್ದೇನೆ. ವಿಜಯೇಂದ್ರ ಬಹಳ ವೀರರು ಶೂರರು ಹಾಗಾಗಿ ನಮ್ಮ ಪಕ್ಷದ ಬಾವುಟ ಹಾರುದು ಹಾಕಿದ್ದಾರೆ. ನಮಗೆ ಕೂತ ಜಾಗದಲ್ಲೇ ಬಾವುಟ ಹಾಕಿಸುವ, ಬ್ಯಾನರ್ ಹಾಕಿಸುವ ಶಕ್ತಿ ಇದೆ. ಆದರೆ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಈ ರೀತಿ ಬಾವುಟ, ಬ್ಯಾನರ್ ಹರಿದು ಹಾಕಿ ಕಿಡಿಗೇಡಿಗಳಂತೆ ವರ್ತಿಸಬಾರದು ಎಂದು ವಾಗ್ದಾಳಿ ನಡೆಸಿದರು.

17 ಕೋಟಿ ಆರ್ ಟಿ ಜಿಎಸ್ ಮಾಡಿಸಿಕೊಂಡು ಅಪ್ಪನನ್ನೇ ಜೈಲಿಗೆ ಕಳುಹಿಸಿದವರು. ಭ್ರಷ್ಟಾಚಾರದಲ್ಲಿ ಪ್ರಪಂಚಕ್ಕೆ ಮಾದರಿಯಾದವರು. ಇಂತವರಿಂದ ನಾವು ಕಲಿಯಬೇಕಿಲ್ಲ. ಬಿಜೆಪಿ ಕ್ಷೇತ್ರದಿಂದ ಪಾದಯಾತ್ರೆ ಮಾಡಬಾರದು ಎಂಬುದು ಇಲ್ಲ. ಸಂವಿಧಾನದಲ್ಲಿ ಯಾರು ಎಲ್ಲಿಂದ ಬೇಕಾದರೂ ಪಾದಯಾತ್ರೆ ಮಾಡಬಹುದು ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular