HomeIndiaದೇಶದ ಮೊದಲ ಕೇಸ್​: ಮಗುವಿನ ನಿರೀಕ್ಷೆಯಲ್ಲಿದೆ ಸಲಿಂಗಿ ದಂಪತಿ....!

ದೇಶದ ಮೊದಲ ಕೇಸ್​: ಮಗುವಿನ ನಿರೀಕ್ಷೆಯಲ್ಲಿದೆ ಸಲಿಂಗಿ ದಂಪತಿ….!

ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ಕೇರಳದ ಕೋಝಿಕೋಡ್‌ನ ಸಲಿಂಗ ದಂಪತಿ ಸ್ಫೂರ್ತಿದಾಯಕ ಮತ್ತು ಶಕ್ತಿಯುತ ಫೋಟೋಶೂಟ್‌ನೊಂದಿಗೆ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿ ಒಳ್ಳೆಯ ಸುದ್ದಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಜಿಯಾ, ಪುರುಷನಾಗಿ ಹುಟ್ಟಿ ಮಹಿಳೆಯಾಗಿ ಪರಿವರ್ತನೆಗೊಂಡರೆ, ಜಹಾದ್ ಮಹಿಳೆಯಾಗಿ ಹುಟ್ಟಿ ಪುರುಷನಾಗಿ ಬದಲಾದರು. ದಂಪತಿ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಇದ್ದು ಜಿಯಾ ಗರ್ಭ ಧರಿಸಿದ್ದಾರೆ. ಜಿಯಾ ಪಾವಲ್ ಅವರು ಇದರ ಕುರಿತು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಟ್ಟಿನಿಂದಾಗಲೀ, ದೇಹದಿಂದಾಗಲೀ ಹೆಣ್ಣಾಗದಿದ್ದರೂ ನನ್ನಲ್ಲಿನ ಹೆಣ್ತನ ಇತ್ತು. ನನ್ನೊಳಗಿನ ಅಮ್ಮನಾಗುವ ಕನಸು ನನಸಾಗುತ್ತಿದೆ ಎಂದು ಬರೆದಿದ್ದಾರೆ.

“ಸಮಯವು ನಮ್ಮನ್ನು ಒಟ್ಟಿಗೆ ತಂದಿದೆ. ಇದಾಗಿ ಮೂರು ವರ್ಷಗಳಾಗಿವೆ. ನನ್ನ ತಾಯಿಯ ಕನಸಿನಂತೆ, ಅವನ ತಂದೆಯ ಕನಸು ಮತ್ತು ನಮ್ಮದೇ ಆದ ಆಸೆ ನಮ್ಮನ್ನು ಒಂದು ಆಲೋಚನೆಗೆ ತಂದಿದೆ. ಇಂದು 8 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದು, ನೆಟ್ಟಿಗರಿಂದ ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

For Latest News Updates, Join Our Whatsapp Community🚩
RELATED ARTICLES

Most Popular