HomeIndiaಬುಡಕಟ್ಟು ಯುವತಿ ಮೇಲೆ ಅತ್ಯಾಚಾರ: 75 ವರ್ಷದ ವೃದ್ಧನ ವಿರುದ್ಧ FIR ದಾಖಲು

ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ: 75 ವರ್ಷದ ವೃದ್ಧನ ವಿರುದ್ಧ FIR ದಾಖಲು

ತಿರುವನಂತಪುರಂ: ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಕೇರಳ ಮೂಲದ 75 ವರ್ಷದ ವೃದ್ಧನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಒಡಿಶಾ ಮೂಲದ 23 ವರ್ಷದ ಯುವತಿ ಮೇಲೆ ಕೇರಳ ಮೂಲದ ವೃದ್ಧ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ಒಡಿಶಾ ಮೂಲದ ಗಜಪತಿ ಜಿಲ್ಲೆಯವರಾಗಿದ್ದು, ಮನೆ ಕೆಲಸ ಮಾಡುತ್ತಿದ್ದಳು. ಆಕೆಯ ಮೇಲೆ ಜ್ಯೂಸ್ ಎರಚಿ ವೃದ್ಧ ಕೆ.ಶಿವಪ್ರಸಾದ್ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಪೊಲಿಸರು ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಂಧನ ಭೀತಿಯಲ್ಲಿರುವ ಆರೋಪಿ ತಲೆಮರೆಸಿಕೊಂಡಿದ್ದು, ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಆರೋಪಿ ಕೆ.ಶಿವಪ್ರಸಾದ್ ಕೇರಳ ರಾಜ್ಯ ಕೃಷಿ ನಿಗಮ, ತೋಟಗಾರಿಕಾ ಉತ್ಪನ್ನಗಳ ಅಭಿವೃದ್ಧಿ ನಿಗಮ, ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮಗಳಲ್ಲಿಯೂ ಸೇವೆ ಸಲ್ಲಿರುವ ಮಾಹಿತಿಯಿದೆ.

For Latest News Updates, Join Our Whatsapp Community🚩
RELATED ARTICLES

Most Popular