HomeKarnatakaBIG NEWS: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕ ಅರೆಸ್ಟ್

BIG NEWS: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕ ಅರೆಸ್ಟ್

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಏರ್ ಏಷ್ಯಾ ವಿಮಾನವನ್ನು ಡಿಬೋರ್ಡಿಂಗ್ ಮಾಡುವಾಗ ಪ್ರಯಾಣಿಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 21 ವರ್ಷದ ಗಗನಸಖಿ ಆರೋಪಿಸಿದ್ದಾರೆ. ‌

ಮೇ 22ರ ಸೋಮವಾರದಂದು ಈ ಘಟನೆ ನಡೆದಿದೆ. ಆಕೆಗೆ ಕಿರುಕುಳ ನೀಡಿದ ಪ್ರಯಾಣಿಕನನ್ನು ಕೇರಳದ ಪಾಲಕ್ಕಾಡ್ ನಿವಾಸಿ ಸಿಜಿನ್ ಎಂದು ಗುರುತಿಸಲಾಗಿದ್ದು, ವಿಮಾನ ಲ್ಯಾಂಡ್ ಆದ ಕೆಲವೇ ಕ್ಷಣಗಳಲ್ಲಿ ಬಂಧಿಸಲಾಗಿದೆ.

ಕೊಚ್ಚಿಯಿಂದ ಬೆಂಗಳೂರಿನ ಮೂಲಕ ಭೋಪಾಲ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನದ ಸಿಬ್ಬಂದಿಯಲ್ಲಿ ಗಗನಸಖಿ ಇದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಯಾಣಿಕ ಸಿಜಿನ್ ಗೋವಾಗೆ ಹೋಗಲು ವಿಮಾನವನ್ನು ಬದಲಾಯಿಸಬೇಕೇ ಎಂದು ಫ್ಲೈಟ್ ಅಟೆಂಡೆಂಟ್‌ಗೆ ಕೇಳಿದ್ದಾರೆ. ವಿಮಾನವು ಭೋಪಾಲ್ ಕಡೆಗೆ ಹೋಗುತ್ತಿದೆ, ಗೋವಾಗೆ ಹೋಗಬೇಕಾದರೆ ಕೆಳಗಿಳಿದು ಬೇರೆ ವಿಮಾನವನ್ನು ಹತ್ತಬೇಕು ಎಂದು ಗಗನಸಖಿ ಪ್ರತಿಕ್ರಿಯಿಸಿದ್ದಾರೆ.

ಆದರೆ ಈ ವೇಳೆ ಸಿಜಿನ್ ಗಗನಸಖಿ ಬಳಿಗೆ ಬಂದು ಅನುಚಿತವಾಗಿ ಸ್ಪರ್ಶಿಸಿದ ಆರೋಪ ಮಾಡಲಾಗಿದೆ. ವಿಮಾನ ಲ್ಯಾಂಡ್ ಆದ ನಂತರ ಫ್ಲೈಟ್ ಅಟೆಂಡೆಂಟ್ ಏರ್‌ಪೋರ್ಟ್‌ನಲ್ಲಿರುವ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ ಸಿಜಿನ್‌ನನ್ನು ಕೆಐಎ ಪೊಲೀಸರಿಗೆ ಒಪ್ಪಿಸಲಾಯಿತು.

For Latest News Updates, Join Our Whatsapp Community🚩
RELATED ARTICLES

Most Popular