ವಯನಾಡು ಗುಡ್ಡ ಕುಸಿತ ದುರಂತ: ನಾಪತ್ತೆಯಾಗಿದ್ದ ರಾಜ್ಯದ 9 ಜನರಲ್ಲಿ 8 ಮಂದಿ ಮೃತದೇಹ ಪತ್ತೆ

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ರಾಜ್ಯದ ಒಂಬತ್ತು ಜನರ ಪೈಕಿ ಎಂಟು ಜನರ ಶವಗಳು ಪತ್ತೆಯಾಗಿವೆ.

ಮೈಸೂರು ಟಿ. ನರಸೀಪುರ ತಾಲೂಕಿನ ಉಕ್ಕಲಗೆರೆ ಮೂಲದವರಾದ ಗುರುಮಲ್ಲನ(60), ಸಾವಿತ್ರಿ(54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜಿತು(11), ದಿವ್ಯಾ(35) ಹಾಗೂ ಶ್ರೇಯಾ(19) ಅವರ ಶವ ಪತ್ತೆಯಾಗಿದೆ. ಸವಿತಾ ಎಂಬುವವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಗುಂಡ್ಲುಪೇಟೆ ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿದ್ದ ಈ ಕುಟುಂಬದಲ್ಲಿ ಏಕೈಕ ವೃದ್ಧೆ ಮಾದೇವಿ ಬದುಕುಳಿದಿದ್ದು, ಅವರೊಂದಿಗೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read