HomeLatest NewsBIG NEWS: ಮತ್ತೊಂದು ಹೆಲಿಕಾಪ್ಟರ್ ದುರಂತ: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿ 6 ಜನರು...

BIG NEWS: ಮತ್ತೊಂದು ಹೆಲಿಕಾಪ್ಟರ್ ದುರಂತ: ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿ 6 ಜನರು ದುರ್ಮರಣ

ಡೆಹ್ರಾಡೂನ್: ಅಹಮದಾಬಾದ್  ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 274 ಜನರು ಸಾವನ್ನಪ್ಪಿರುವ ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ಹೆಲಿಕಾಪ್ಟರ್ ಪತನದ ದುರಂತ ನಡೆದಿದೆ.

ಕೇದಾರನಾಥದ ಗೌರಿಕುಂಡ್ ಪ್ರದೇಶದಲ್ಲಿ ಚಾರ್ ಧಾಮ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಒಂದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಪೈಲಟ್, ಮಗು ಸೇರಿ ಆರು ಜನರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರ ಮುಂಜಾನೆ 5:20ರ ಸುಮಾರಿಗೆ ಯಾತ್ರಿಕರು ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್ ಪತನಗೊಂಡು ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹವಾಮಾನ ವೈಫರೀತ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular