HomeLatest NewsBIG NEWS : 'DCET' ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದವರಿಗೆ 'KEA' ಮಹತ್ವದ...

BIG NEWS : ‘DCET’ ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದವರಿಗೆ ‘KEA’ ಮಹತ್ವದ ಮಾಹಿತಿ.!

ಬೆಂಗಳೂರು : DCET-25 ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನಮೂದಿಸಿದ್ದರೆ ಅದನ್ನು ಸರಿಪಡಿಸಿಕೊಳ್ಳಲು #KEA ಕಚೇರಿಗೆ ಜೂನ್ 18 ಅಥವಾ 19ರಂದು ಖುದ್ದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸೂಚಿಸಿದ್ದಾರೆ.

ಅಭ್ಯರ್ಥಿಗಳು ಡಿಸಿಇಟಿ-2025ಕ್ಕೆ ಸಲ್ಲಿಸಿದ ಅರ್ಜಿ ಪ್ರತಿ, ಪ್ರವೇಶ ಪತ್ರ, ಪರಿಶೀಲನಾ ಪತ್ರ ಮತ್ತು ಅಗತ್ಯವಾದ ಎಲ್ಲಾ ಮೂಲ ದಾಖಲೆಗಳು ಮತ್ತು ಎಲ್ಲಾ ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಪರಿಶೀಲನೆಗೆ ಹಾಜರಾಗುವ ಮೊದಲು 16-06-2025 ರಂದು ಸ್ಲಾಟ್ ಬುಕಿಂಗ್ ಮಾಡಿರಬೇಕು.

ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದೇ ಇರುವವರು, ದಾಖಲೆಗಳು / ಕ್ಷೇಮುಗಳು / ಡಿಪ್ಲೊಮಾ ಪರೀಕ್ಷೆಯ ಅಂಕಗಳು / ವೃತ್ತಿನಿರತ ಕ್ಷೇಮುಗಳನ್ನು ಸರಿಯಾಗಿ ನಮೂದಿಸದವರು ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳಬಹುದು. ಎಲ್ಲಾ ಮಾಹಿತಿ ಸರಿ ಇರುವವರು ಕೆಇಎ ಕಚೇರಿಗೆ ಬರುವ ಅಗತ್ಯವಿಲ್ಲ.
ದಾಖಲೆಗಳ ಪರಿಶೀಲನೆಗೆ ಹಾಜರಾದ ನಂತರ ಅನೇಕರಿಗೆ ತಮ್ಮ ತಪ್ಪುಗಳು ಅರಿವಿಗೆ ಬಂದಿದ್ದು ಅಂತಹವರು ಕೂಡ ಬರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಟಾ ಅಂಕ ನಮೂದು:
ಡಿಪ್ಲೊಮಾ ಮೂಲಕ ಆರ್ಕಿಟೆಕ್ಟರ್ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ 2025ರ ನಾಟಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ನಾಟಾ -2025ರಲ್ಲಿ ಪಡೆದಿರುವ ಅಂಕಗಳನ್ನು ಜೂನ್ 17 ಮತ್ತು18ರಂದು ಪ್ರಾಧಿಕಾರದ ಪೋರ್ಟಲ್ ನಲ್ಲಿ ನಮೂದಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular