HomeKarnatakaನಗರ ಸ್ಥಳೀಯ ಸಂಸ್ಥೆಗಳಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ...

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ | KEA Recruitment

ಬೆಂಗಳೂರು: ಪೌರಾಡಳಿತ ನಿರ್ದೇಶನಾಲಯ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ – ಸಿ (ನೀರು ಸರಬರಾಜು ಆಪರೇಟರ್, ಸಹಾಯಕ ನೀರು ಸರಬರಾಜು ಆಪರೇಟರ್, ಎಲೆಕ್ಟ್ರೀಷಿಯನ್ ಗ್ರೇಡ್- l) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ.

ಶುಲ್ಕ ಪಾವತಿಗೆ ಅ.8ರವರೆಗೆ ಸಮಯ ನೀಡಲಾಗಿದೆ. ಅಭ್ಯರ್ಥಿಗಳು ಇದರ ಉಪಯೋಗ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಯಶಸ್ವಿಯಾಗಿ ನಡೆದ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಪರೀಕ್ಷೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.

ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ- ಪತ್ರಿಕೆ- 1ರ ಪರೀಕ್ಷೆ ನಡೆಯಿತು.

ಒಟ್ಟು 4,487 ಅಭ್ಯರ್ಥಿಗಳ ಪೈಕಿ 3,679 ( 82%) ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

#KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಕಮಾಂಡ್ ಸೆಂಟರ್ ನಲ್ಲಿ ಖುದ್ದು ಇದ್ದು ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು.

ಸೆ.30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ.

ನರ್ಸಿಂಗ್ ಕೋರ್ಸ್ ಪ್ರವೇಶ

PB.BSc, #Nursing/BSc-AHS (Lateral Entry): ಈ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅ.4ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೇ ಶುಲ್ಕ ಪಾವತಿಸಬೇಕು. ಇದುವರೆಗೂ ಅರ್ಜಿ ಸಲ್ಲಿಸದೇ ಇರುವವರು ಇದರ ಉಪಯೋಗ ಪಡೆದುಕೊಳ್ಳಬಹುದು.

ಖಾಸಗಿ ಸಂಸ್ಥೆ ವಿತರಿಸುತ್ತಿರುವ ‘ನಮ್ಮ ಕುಟುಂಬ’ ಕಾರ್ಡ್ ಗಳು ಯಶಸ್ವಿನಿ ಯೋಜನೆಯದ್ದಲ್ಲ: ಸಹಕಾರ ಇಲಾಖೆ ಸ್ಪಷ್ಟನೆ

ಕೊಪ್ಪಳ: ಖಾಸಗಿ ಸಂಸ್ಥೆ ವಿತರಿಸುತ್ತಿರುವ ‘ನಮ್ಮ ಕುಟುಂಬ’ ಕಾರ್ಡ್ ಗಳು ಯಶಸ್ವಿನಿ ಯೋಜನೆಯದ್ದಲ್ಲ ಎಂದು ಸಹಕಾರ ಇಲಾಖೆ ಸ್ಪಷ್ಟನೆ ನೀಡಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಖಾಸಗಿ ಸಂಸ್ಥೆಯೊಂದು ವಿತರಿಸುತ್ತಿರುವ ಆರೋಗ್ಯ ಕಾರ್ಡ್ ಗಳಿಗೂ ಸರ್ಕಾರದ ಅಧಿಕೃತ ಯಶಸ್ವಿನಿ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ್ದಾರೆ.

ಸಹಕಾರ ಇಲಾಖೆಯು ಜಾರಿಗೊಳಿಸಿರುವ ‘ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ’ಯು ಕೇವಲ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಸದಸ್ಯರಿಗೆ ಮಾತ್ರ ಅನ್ವಯವಾಗುವ ವಿಶೇಷ ಯೋಜನೆಯಾಗಿದೆ. ಇದರಡಿ ನೋಂದಾಯಿತ ಸದಸ್ಯರು ಯಾವುದೇ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಆದರೆ, ಇತ್ತೀಚಿನ ಪತ್ರಿಕಾ ಪ್ರಕಟಣೆಗಳ ಪ್ರಕಾರ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ನಗರ/ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯವರು ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ‘ನಮ್ಮ ಕುಟುಂಬದ ಆರೋಗ್ಯ ಕಾರ್ಡ್’ಗಳನ್ನು ವಿತರಿಸುತ್ತಿರುವುದು ಕಂಡುಬಂದಿದೆ. ಈ ಕಾರ್ಡ್ ಗಳು ಸಹಕಾರ ಇಲಾಖೆಯಿಂದ ಅಧಿಕೃತವಾಗಿ ಜಾರಿಗೊಳಿಸಲಾದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಕಾರ್ಡ್ ಗಳಲ್ಲ. ಸಾರ್ವಜನಿಕರು ಈ ವ್ಯತ್ಯಾಸವನ್ನು ಗಮನಿಸಿ, ಯಾವುದೇ ರೀತಿಯ ಗೊಂದಲ ಅಥವಾ ವಂಚನೆಗೆ ಒಳಗಾಗಬಾರದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular