
ಇನ್ನೊಂದು ಪ್ರೋಮೋದಲ್ಲಿ ಅಮಿತಾಬ್ರಿಂದ ಜಾಕೆಟ್ ಪಡೆದ ಸ್ಪರ್ಧಿಯೇ 7 ಕೋಟಿ ರೂಪಾಯಿ ಮೌಲ್ಯದ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸುತ್ತಿರೋದನ್ನ ಕಾಣಬಹುದಾಗಿದೆ. ಗೇಮ್ ಶೋ ತುಂಬಾನೇ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿರುವಂತೆ ಕಾಣುತ್ತಿದ್ದು ಸ್ಪರ್ಧಿಯು ಬಚ್ಛನ್ರ ಕಾಲಿಗೆರಗಿ ಅಳುತ್ತಿರೋದು ಸಹ ಪ್ರೋಮೋದಲ್ಲಿದೆ.
ಅಳುತ್ತಿದ್ದ ಸ್ಪರ್ಧಿಯ ಬಳಿಗೆ ಅಮಿತಾಭ್ ತೆರಳಿದ್ದಾರೆ. ಹಾಗೂ ಅವರಿಗೆ ಬೂದು ಬಣ್ಣದ ಜಾಕೆಟ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಳುತ್ತಲೇ ಇದ್ದ ಸ್ಪರ್ಧಿಗೆ ಹಿರಿಯ ನಟ ಬೆನ್ನು ತಟ್ಟಿದ್ದಾರೆ. ಅಮಿತಾಬ್ ಬಚ್ಛನ್ ಎಷ್ಟೇ ತಡೆಯಲು ಯತ್ನಿಸಿದ್ರೂ ಸಹ ಸ್ಪರ್ಧಿ ಅವರ ಆಶೀರ್ವಾದ ಪಡೆದಿದ್ದಾರೆ.
ಸುಮ್ಮನೇ ಭಾವನೆಗಳಲ್ಲಿ ಮುಳುಗಿ ಹೋಗಬೇಡಿ. ಎಲ್ಲದಕ್ಕು ಒಂದು ಕಾರಣ ಇರುತ್ತೆ. ನಾನು ನಿಮಗೆ ಹೇಳುತ್ತೇನೆ ಎಂದು ಅಮಿತಾಬ್ ಬಚ್ಛನ್ ಮಾತನಾಡುತ್ತಿರುವುದೂ ಸಹ ಪ್ರೋಮೋದಲ್ಲಿ ಹಾಕಲಾಗಿದೆ. ಈ ಪ್ರೋಮೋ ನೋಡಿದ ಸಾಕಷ್ಟು ನೆಟ್ಟಿಗರು ಕಮೆಂಟ್ನಲ್ಲಿ ನಿಜಕ್ಕೂ ಇದೊಂದು ಎಮೋಷನಲ್ ಎಪಿಸೋಡ್ ಅಂತಾ ಅಭಿಪ್ರಾಯ ಹೊರಹಾಕ್ತಿದ್ದಾರೆ.

