HomeEntertainmentಆಗಸ್ಟ್ 22ಕ್ಕೆ ರಿಲೀಸ್ ಆಗಲಿದೆ 'ಕೌಂತೇಯ' ಸಿನೆಮಾದ ಖಡಕ್ ಟೀಸರ್

ಆಗಸ್ಟ್ 22ಕ್ಕೆ ರಿಲೀಸ್ ಆಗಲಿದೆ ‘ಕೌಂತೇಯ’ ಸಿನೆಮಾದ ಖಡಕ್ ಟೀಸರ್

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳ ಸಾಲಿಗೆ ‘ಕೌಂತೇಯ’ ಚಿತ್ರ ಸೇರ್ಪಡೆಯಾಗಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ಆಗಸ್ಟ್ 22ರಂದು ಅನಾವರಣಗೊಳ್ಳಲಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಬಿ.ಕೆ. ಚಂದ್ರಹಾಸ ಅವರ ರಚನೆ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ನಟ ಮನೋರಂಜನ್ ರವಿಚಂದ್ರನ್ ಮೊದಲ ಬಾರಿಗೆ ಖಳನಾಯಕನಾಗಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ. ಶರಣ್ಯ ಶೆಟ್ಟಿ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದರೆ, ನಟಿ ಪ್ರಿಯಾಂಕಾ ತಿಮ್ಮೇಶ್ ಶಕ್ತಿಶಾಲಿ ಎಸಿಪಿ ಅಧಿಕಾರಿಯ ಪಾತ್ರದಲ್ಲಿ ಪವರ್‌ಫುಲ್ ಆಗಿ ನಟಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ಹಾಗೂ ಅನನ್ಯ ರಾಜಶೇಖರ್, ಬಿಗ್ ಬಾಸ್ ಖ್ಯಾತಿಯ ನೀತು ಪ್ರಮುಖ ಪಾತ್ರಗಳನ್ನು ಹಂಚಿಕೊಂಡಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಬಲವಾಗಿದ್ದು, ಸುರೇಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಘವೇಂದ್ರ ವಿ ಅವರ ಸಂಗೀತ ನಿರ್ದೇಶನ, ಹರಿ ಮಹದೇವ್ ಅವರ ಸಂಭಾಷಣೆ, ಅನುರಂಜನ್ ಅವರ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular