HomeLatest Newsರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ: 'ಸ್ಪಿರಿಟ್' ಸಿನಿಮಾದ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರಾ ಕತ್ರಿನಾ...

ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ: ‘ಸ್ಪಿರಿಟ್’ ಸಿನಿಮಾದ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರಾ ಕತ್ರಿನಾ ?

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ಸುದ್ದಿಗಳು ಹೊರಬೀಳುತ್ತಿವೆ. ಪೊಲೀಸ್ ಕಥಾಹಂದರ ಹೊಂದಿರುವ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದ ಚಿತ್ರೀಕರಣ ಈಗಾಗಲೇ ಶೇಕಡಾ 40 ರಷ್ಟು ಪೂರ್ಣಗೊಂಡಿದೆ. ಈ ನಡುವೆ ಬಾಲಿವುಡ್‌ನ ಸ್ಟಾರ್ ನಟಿ ಕತ್ರಿನಾ ಕೈಫ್ ಈ ಚಿತ್ರದ ಮೂಲಕ ಮತ್ತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೆಜ್ಜೆ ಇಡಲಿದ್ದಾರೆ ಎಂಬ ವರದಿಗಳು ಸಖತ್ ಸದ್ದು ಮಾಡುತ್ತಿವೆ.

ಬಾಲಿವುಡ್ ಮೂಲಗಳ ಪ್ರಕಾರ, ‘ಸ್ಪಿರಿಟ್’ ಸಿನಿಮಾದಲ್ಲಿನ ಪ್ರಮುಖ ಅತಿಥಿ ಪಾತ್ರ ಒಂದಕ್ಕಾಗಿ ಚಿತ್ರತಂಡ ಕಟ್ರೀನಾ ಕೈಫ್ ಅವರನ್ನು ಸಂಪರ್ಕಿಸಿದೆ. ನಟಿ ಕತ್ರಿನಾ ಕೂಡ ಈ ಪಾತ್ರವನ್ನು ಒಪ್ಪಿಕೊಳ್ಳಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಸ್ತುತ ಅವರು ತಮ್ಮ ಸಣ್ಣ ಮಗುವಿನ ಪೋಷಣೆಯಲ್ಲಿ ನಿರತರಾಗಿರುವುದರಿಂದ, ಶೂಟಿಂಗ್‌ಗೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳನ್ನು ನಿರ್ದೇಶಕರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಷರತ್ತುಗಳಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಒಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಒಂದು ವೇಳೆ ಈ ವಿಷಯ ಅಧಿಕೃತವಾದರೆ, ಕತ್ರಿನಾ ಕೈಫ್ ಬರೋಬ್ಬರಿ 11 ವರ್ಷಗಳ ನಂತರ ಮತ್ತೆ ತೆಲುಗು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದಂತಾಗುತ್ತದೆ. ಆದರೆ, ಈ ವರದಿಗಳ ಕುರಿತು ನಿರ್ಮಾಪಕರಿಂದ ಇನ್ನೂ ಯಾವುದೇ ರೀತಿಯ ಅಧಿಕೃತ ಸ್ಪಷ್ಟನೆ ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿ-ಸಿರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ತೃಪ್ತಿ ಡಿಮ್ರಿ, ವಿವೇಕ್ ಒಬೆರಾಯ್, ಐಶ್ವರ್ಯಾ ದೇಸಾಯಿ ಮತ್ತು ಕಾಂಚನಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡುತ್ತಿರುವ ಈ ಬಹುಭಾಷಾ ಸಿನಿಮಾ 2027 ರ ಮಾರ್ಚ್ 5 ರಂದು ಪ್ರಪಂಚದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular