HomeEntertainmentಸೆಪ್ಟೆಂಬರ್ 22ಕ್ಕೆ 'ಕಠೋರ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸೆಪ್ಟೆಂಬರ್ 22ಕ್ಕೆ ‘ಕಠೋರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ಕಠೋರ’ ಸಿನಿಮಾದ ಮೆಲೋಡಿ ಹಾಡೊಂದು ಇದೇ ಸೆಪ್ಟೆಂಬರ್ 22ರಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ‘ಆಣೆಯ ಮಾಡಿ’ ಎಂಬ ಈ ಹಾಡಿಗೆ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ವಿಜೇತ ಮಂಜಯ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಮೂರ್ತಿ ಸಾಹಿತ್ಯ ಬರೆದಿದ್ದಾರೆ.

ಆದಿತ್ಯ ಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲಕ್ಕಿ ರಾಮ್ ನಾಯಕ ನಟನಾಗಿ ಅಭಿನಯಿಸಿದ್ದು, ಮೋನಿಕಾ, ಶಿವಾಜಿ ರಾಮ್, ರಾಜು ಶಂಕರ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಜೇಶ್  ಛಾಯಾಗ್ರಹಣವಿದ್ದು, ಮರಿಸ್ವಾಮಿ ಸಂಕಲನವಿದೆ. ಬ್ಯಾಟರಾಯಸ್ವಾಮಿ ಕ್ರಿಯೇಶನ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular