ಕಾರವಾರ: ಸರಕು ಸಾಗಾಟ ಹಡಗಿನ ಮೂಲಕ ಕಾರವಾರದ ಬಂದರಿಗೆ ಆಗಮಿಸಿದ್ದ ಪಾಕಿಸ್ತಾನ ಹಾಗೂ ಸಿರಿಯಾ ಮೂಲದ ಪ್ರಜೆಗಳನ್ನು ಹಡಗಿನಲ್ಲಿಯೇ ದಿಗ್ಬಂಧನ ವಿಧಿಸಲಾಗಿದೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇರಾಕ್ ನ ಅಲ್ ಜುಬೇರ್ ನಿಂದ ಕಾರವಾರ ಬಂದರಿಗೆ ಪಾಕಿಸ್ತಾನದ ಓರ್ವ, ಭಾರತದ ಮೂಲದ 15 ಹಾಗೂ ಸಿರಿಯಾದ ಇಬ್ಬರು ಪ್ರಜೆಗಳು ಸರಕು ಸಾಗಣಿಕೆ ಹಡಗಿನ ಮೂಲಕ ಆಗಮಿಸಿದ್ದರು.
ಬಿಟುಮಿನ್ ತುಂಬಿಕೊಂಡು ಆಗಮಿಸಿದ್ದ ಹಡಗಿನಲ್ಲಿ ಬಂದಿದ್ದ ಇವರನ್ನು ಎರಡು ದಿನಗಳ ಕಾಲ ಹಡಗಿನಲ್ಲಿಯೇ ದಿಗ್ಬಂಧನಕ್ಕೊಳಪಡಿಸಲಾಗಿತ್ತು. ಕರಾವಳಿ ಕಾವಲು ಪಡೆ, ಪೊಲೀಸರು ಪಾಕಿಸ್ತಾನ ಹಾಗೂ ಸಿರಿಯಾ ಪ್ರಜೆಗಳ ದಾಖಲೆ ಪರುಶೀಲಿಸಿ ವಿಚಾರಣೆ ನಡೆಸಿದ್ದರು. ಬಳಿಕ ಹಡಗಿನಲ್ಲಿದ್ದ ವಸ್ತುಗಳನ್ನು ಅನ್ ಲೋಡ್ ಮುಕ್ತಾಯಗೊಂಡ ಬಳಿಕ ಅದೇ ಹಡಗಿನಲ್ಲಿ ಪ್ರಜೆಗಳನ್ನು ವಾಪಾಸ್ ಕಳುಹಿಸಲಾಗಿದೆ.