HomeKarnatakaಮದ್ಯಪ್ರಿಯರಿಗೆ ಬಿಗ್ ಶಾಕ್: ಮೇ 1ರಿಂದ ಹೊಸ ಅಬಕಾರಿ ನೀತಿ ಜಾರಿ: ಎಣ್ಣೆ ದರದಲ್ಲಿ ಭಾರಿ...

ಮದ್ಯಪ್ರಿಯರಿಗೆ ಬಿಗ್ ಶಾಕ್: ಮೇ 1ರಿಂದ ಹೊಸ ಅಬಕಾರಿ ನೀತಿ ಜಾರಿ: ಎಣ್ಣೆ ದರದಲ್ಲಿ ಭಾರಿ ಏರಿಕೆ

ಬೆಂಗಳೂರು: ಮದ್ಯ ಪ್ರಿಯರಿಗೆ ರಾಅಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಮೇ 1 ರಿಂದ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದ್ದು, ಮದ್ಯದ ದರ ಶೇ 20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಆಲ್ಕೋಹಾಲ್ ಪ್ರಮಾಣದ (AIB) ಆಧಾರದ ಮೇಲೆ ತೆರಿಗೆ ವಿಧಿಸುವುದರಿಂದ ಸಾಮಾನ್ಯ ಜನರು ಬಳಸುವ ಬ್ರಾಂಡ್‌ಗಳ ಬೆಲೆ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ದುಬಾರಿಯಾಗಲಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರಿಗೆ ದುಬಾರಿಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ 20ರಷ್ಟು ಏರಿಕೆಯಾಗಲಿದೆ.

ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ 80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಅಂದಾಜಿದೆ.

ಹೆಚ್ಚಾಗಲಿರುವ ದರ ಪಟ್ಟಿ:
ಸ್ಲ್ಯಾಬ್-1: ₹80 ರಿಂದ ₹95ಕ್ಕೆ ಏರಿಕೆ (₹15 ಹೆಚ್ಚಳ)
ಸ್ಲ್ಯಾಬ್-2: ₹95 ರಿಂದ ₹110ಕ್ಕೆ ಏರಿಕೆ (₹15 ಹೆಚ್ಚಳ)
ಸ್ಲ್ಯಾಬ್-3: ₹120 ರಿಂದ ₹135ಕ್ಕೆ ಏರಿಕೆ (₹15 ಹೆಚ್ಚಳ)
ಸ್ಲ್ಯಾಬ್-4: ₹150 ರಿಂದ ₹170ಕ್ಕೆ ಏರಿಕೆ (₹20 ಹೆಚ್ಚಳ)
ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ ದರದಲ್ಲಿ ಸುಮಾರು 50 ರಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಹೊರೆ ಮತ್ತಷ್ಟು ಹೆಚ್ಚಾಗಲಿದೆ.

ರಾಜ್ಯ ಸರ್ಕಾರ ಮದ್ಯದದ ಪದೇ ಪದೇ ಏರಿಸುತ್ತಿದ್ದು, ಎಣ್ಣೆ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಅರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಈ ರೀತಿ ಮದ್ಯದ ದರ ಏರಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular