ಬೆಂಗಳೂರು: ರೈಲು ಪ್ರಯಾಣಿಕರಿಗೆ ರೈಲ್ವೆ ಮಂಡಳಿ ಗುಡ್ ನ್ಯೂಸ್ ನೀಡಿದೆ. ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ರೈಲ್ವೇ ಮಂಡಳಿ ಖಾಯಂ ಸೇವೆಗೆ ಪರಿವರ್ತಿಸಿದೆ. ಇದೇ ವೇಳೆ ಟಿಕೆಟ್ ದರದಲ್ಲಿಯೂ ಗಣನೀಯ ಇಳಿಕೆ ಮಾಡಿದೆ.
ಹೌದು. ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಲಾಗಿದೆ. 6 ಎಕ್ಸ್‌ಪ್ರೆಸ್ ರೈಲುಗಳು, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿದಂತೆ ಒಟ್ಟು 19 ರೈಲುಗಳು ಖಾಂ ಸೇವೆ ಒದಗಿಸಲಿವೆ. ಇದರಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ.
ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈಗ ಖಾಯಂ ಸೇವೆಗೆ ಪರಿವರ್ತನೆಯಾಗುವುದರಿಂದ ಟಿಕೆಟ್ ದರದಲ್ಲಿ ಇಳಿಕೆಯಾಅಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಸ್ಲೀಪರ್ ಕೋಚ್ಗಳಲ್ಲಿ ಶೇ.30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ. 10-15ರವರೆಗೆ ದರ ಕಡಿಮೆಯಾಗಲಿದೆ ಎನ್ನಲಾಗಿದೆ.
6 ವಿಶೇಷ ರೈಲುಗಳು ಖಾಯಂ ಸೇವೆಗೆ:
ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ ( ರೈ.ಸಂ 16281/16282) ವಾರಕ್ಕೊಮ್ಮೆ ಸಂಚರಿಸಲಿದೆ
ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (ರೈ.ಸಂ 16563/16564) ವಾರಕ್ಕೊಮ್ಮೆ ಸಂಚರಿಸಲಿದೆ
SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (ರೈ.ಸಂ 16559/16560) ವಾರಕ್ಕೊಮ್ಮೆ ಸಂಚರಿಸಲಿದೆ
ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (ರೈ.ಸಂ16555/16556) ವಾರಕ್ಕೊಮ್ಮೆ ಸಂಚರಿಸಲಿದೆ
ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (ರೈ.ಸಂ17363/17364) ವಾರಕ್ಕೊಮ್ಮೆ ಸಂಚರಿಸಲಿದೆ
ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (ರೈ.ಸಂ 10109/10110)
9 ಮೆಮು, ಡೆಮು ರೈಲುಗಳು:
ಬೆಂಗಳೂರು – ಹೊಸೂರು ಮೆಮು (ರೈ.ಸಂ 66595/96) ಪ್ರತಿದಿನ ಸಂಚರಿಸಲಿದೆ
ಹುಬ್ಬಳ್ಳಿ – ವಿಜಯಪುರ ಮೆಮು ( ರೈ.ಸಂ66501/02) ಪ್ರತಿದಿನ ಸಂಚರಿಸಲಿದೆ
ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ66597/98) ಪ್ರತಿದಿನ ಸಂಚರಿಸಲಿದೆ
ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ 06213/14) ವಾರಕ್ಕೆ 3 ಬಾರಿ ಸಂಚರಿಸಲಿದೆ
ಬಂಗಾರಪೇಟೆ – SMVT ಬೆಂಗಳೂರು ಮೆಮು (ರೈ.ಸಂ 66537/38) ಪ್ರತಿದಿನ ಸಂಚರಿಸಲಿದೆ
ಹೊಸಪೇಟೆ – ಹುಬ್ಬಳ್ಳಿ ಡೆಮು (ರೈ.ಸಂ76507/08) ವಾರಕ್ಕೊಮ್ಮೆ ಸಂಚರಿಸಲಿದೆ
ಬಳ್ಳಾರಿ – ದಾವಣಗೆರೆ ಡೆಮು (ರೈ.ಸಂ76509/10)ವಾರಕ್ಕೆ 6 ದಿನ ಸಂಚರಿಸಲಿದೆ
ಬೆಂಗಳೂರು – ಹಾಸನ ಡೆಮು (ರೈ.ಸಂ66525/26)ವಾರಕ್ಕೆ 6 ದಿನ ಸಂಚರಿಸಲಿದೆ
ಬಳ್ಳಾರಿ – ಹೊಸಪೇಟೆ ಡೆಮು (ರೈ.ಸಂ07397/98) ವಾರಕ್ಕೆ 6 ದಿನ ಸಂಚರಿಸಲಿದೆ
ಇದೇ ವೇಳೆ ಬೆಂಗಳೂರು-ಚನ್ನಪಟ್ಟಣ, ಮೈಸೂರು-ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ-ಹಿಂದೂಪುರ ಹಾಗೂ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ. ಇದರಿಂದಾಗಿ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

