ಬೆಂಗಳೂರು: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(KSDC) ಜಂಟಿಯಾಗಿ ರಾಜ್ಯದ ಯುವಜನರಲ್ಲಿರುವ ವೃತ್ತಿಪರ ಕೌಶಲ್ಯಗಳನ್ನು ಪ್ರದರ್ಶಿಸಲು “ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (India Skills Competition 2026-27)” ಅನ್ನು ಆಯೋಜಿಸುತ್ತಿವೆ.
ಈ ಸ್ಪರ್ಧೆಯು ಜಿಲ್ಲಾ, ವಲಯ ಮತ್ತು ರಾಜ್ಯ ಮಟ್ಟಗಳಲ್ಲಿ ನಡೆಯಲಿದ್ದು, ಯುವಜನರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಹಾಗೂ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅಪೂರ್ವ ಅವಕಾಶ ಕಲ್ಪಿಸಲಿದೆ.
ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಹೆಜ್ಜೆ ಗುರುತು:
2026ರ ಸೆಪ್ಟೆಂಬರ್ ನಲ್ಲಿ ಚೀನಾದ ಶಾಂಫೈನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ 16 ಅಭ್ಯರ್ಥಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಮುಂಬರುವ 2028ರ ವಿಶ್ವ ಕೌಶಲ್ಯ ಸ್ಪರ್ಧೆಯು ಜಪಾನ್ ದೇಶದ ಐಚಿ (Aichi) ಯಲ್ಲಿ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ರಾಜ್ಯದ ಪ್ರತಿಭಾವಂತ ಯುವಜನರನ್ನು ಸಜ್ಜುಗೊಳಿಸಲು ಕೌಶಲ್ಯ ಒಲಂಪಿಕ್ಸ್ ಯೋಜಿಸಲಾಗಿದೆ.
ವಿವಿಧ ಕಾಲೇಜುಗಳು, ತಾಂತ್ರಿಕ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು/ಯುವಜನರು ಭಾಗವಹಿಸಬಹುದಾಗಿದೆ ಅಸಕ್ತ ಅಭ್ಯರ್ಥಿಗಳು ‘ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್’ ವೆಬ್‌ಸೈಟ್ www.skillindiadigital.gov.in ಮೂಲಕ 2026 ನೇ ಸೆಪ್ಟೆಂಬರ್ 15 ರ ಒಳಗಾಗಿ ನೋಂದಾಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಣೇಶ್, ಉಪ ಪ್ರಧಾನ ವ್ಯವಸ್ಥಾಪಕರು, ಕೆ.ಎಸ್.ಡಿ.ಸಿ (KSDC), ಬೆಂಗಳೂರು, ಮೊಬೈಲ್ ದೂರವಾಣಿ ಸಂಖ್ಯೆ 9686409096 ಅಥವಾ ಇ-ಮೇಲ್: [email protected] ಗೆ ಸಂಪರ್ಕಿಸುವಂತೆ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ತಿಳಿಸಿದ್ದಾರೆ. (ಚಿತ್ರಕೃಪೆ: ಎಐ)
ಸಾರ್ವಜನಿಕರು ಗಣೇಶೋತ್ಸವದಲ್ಲಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು
ಗಣಪತಿ ಪೆಂಡಾಲ್‍ಗೆ ಕಡ್ಡಾಯವಾಗಿ ತಾತ್ಕಾಲಿಕ ಮೀಟರ್‍ನ್ನು ಪಡೆಯತಕ್ಕದ್ದು. ಯಾವುದೇ ಮನೆ/ ಮಳಿಗೆ ಮೀಟರ್‍ಗಳಿಂದ ವಿದ್ಯುತ್ ತೆಗೆದುಕೊಳ್ಳುವಂತಿಲ್ಲ ಹಾಗೂ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಸಂಪರ್ಕ ಪಡೆಯುವುದು. ಯಾವುದೇ ವಿದ್ಯುತ್ ಕಂಬಗಳಿಂದ ಅನಧೀಕೃತವಾಗಿ ವಿದ್ಯುತ್ ಲೈನ್ ತೆಗೆದುಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ.
ಯಾವುದೇ ರೀತಿ ವಿದ್ಯುತ್ ಅವಘಡಗಳು ಸಂಭವಿಸಿದ್ದಲ್ಲಿ ತಾವುಗಳೇ ನೇರ ಹೊಣೆಗಾರರಾಗಿರುತ್ತೀರಿ. ಆದ್ದರಿಂದ, ಎಚ್ಚರಿಕೆಯಿಂದ ವಿದ್ಯುತ್ ಬಳಸುವಂತೆ ಸೂಚಿಸಲಾಗಿದೆ.
ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್‍ಗಳನ್ನು ಅಳವಡಿಸುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ, ಸೀರಿಯಲ್ ಲೈಟ್ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ, ಸೀರಿಯಲ್ ಲೈಟ್ ಹಾಗೂ ದೀಪಗಳನ್ನು ಹಾಕುವಾಗ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಪಡೆಯಬಾರದು. ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರದು. ಗಣೇಶ ಮೂರ್ತಿಯ ಮೆರವಣಿಗೆ ವೇಳೆ ರಸ್ತೆ ಬದಿಯ ವಿದ್ಯುತ್ ಮಾರ್ಗಗಳ ಬಗ್ಗೆ ಎಚ್ಚರವಿರಬೇಕು ಹಾಗೂ ಎತ್ತರದ ಕಮಾನುಗಳನ್ನು ನಿರ್ಮಿಸದೇ, ವಿದ್ಯುತ್ ತಂತಿಗಳನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಬಾರದು.
ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಚಾ.ವಿ.ಸ.ನಿ.ನಿ.(ಸೆಸ್ಕ್)ಯ ಆಯಾಯ ಉಪವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೆ, ಅವರು ಅಗತ್ಯ ನೆರವು ಒದಗಿಸುತ್ತಾರೆ. ವಿದ್ಯುತ್ ಪರಿಕರಗಳು ಇರುವ ಸ್ಥಳಗಳಲ್ಲಿ ‘ಅಪಾಯ ವಲಯ’ ಎಂದು ಸೂಚಿಸಬೇಕು ಎಂದು ಮಡಿಕೇರಿ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.

