BIG BREAKING: ರಾಜ್ಯದಲ್ಲಿ 8 ಜನರಲ್ಲಿ JN.1 ಸೋಂಕು ಪತ್ತೆ; ಕರ್ನಾಟಕಕ್ಕೂ ಕಾಲಿಟ್ಟ ಕೋವಿಡ್ ರೂಪಾಂತರಿ ವೈರಸ್

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗಲೇ ಕೋವಿಡ್ ರೂಪಾಂತರಿ ವೈರಸ್ JN.1 ಕರ್ನಾಟಕ್ಕೂ ಎಂಟ್ರಿ ಕೊಟ್ಟಿದೆ.

ರಾಜ್ಯದಲ್ಲಿ 8 ಜನರಿಗೆ ಕೊರೊನಾ ರೂಪಾಂತರಿ JN.1 ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಅಟ್ಟಹಾಸ ಮೆರೆದಿದ್ದ ಕೋವಿಡ್ ರೂಪಾಂತರಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದು, ಕ್ರಿಸ್ ಮಸ್, ಹೊಸ ವರ್ಷಾಚರಣೆ ಸಂದರ್ಭದಲ್ಲೇ ಮಹಾಮಾರಿ ಇನ್ನಷ್ಟು ಆತಂಕ ಸೃಷ್ಟಿಸಿದೆ.

ಇತ್ತೀಚಿನ ಮಾಹಿತಿ ಪ್ರಕಾರ ದೇಶದಲ್ಲಿ ಕೊರೊನಾ ರೂಪಾಂತರಿ JN.1 ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read