ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಪಡೆಯುವುದನ್ನು ಸರಳೀಕರಣ ಮಾಡಿದೆ. ಇದಕ್ಕಾಗಿಯೇ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (POPSK)ಗಳನ್ನು ಸ್ಥಾಪನೆ ಮಾಡಲಾಗಿದೆ. 452 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ವಿವಿಧ ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ.
ದೇಶಾದ್ಯಂತ ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸುತ್ತಿರುವ ಮತ್ತು ಪಾಸ್‌ಪೋರ್ಟ್ ಸೇವೆಗಳನ್ನು ಹೆಚ್ಚು ಒಳಗೊಳ್ಳುವಂತೆ ಹಾಗೂ ಕೈಗೆಟುಕುವಂತೆ ಮಾಡುತ್ತಿರುವ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಜನರಿಗೆ ಸಹಕಾರಿಯಾಗಿವೆ.
23 ವಲಯಗಳಲ್ಲಿ 452 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಪ್ರಯಾಣದ ದೂರ, ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಪಾಸ್‌ಪೋರ್ಟ್ ಸೇವೆಗಳನ್ನು ಪಡೆಯಲು ಇದು ಸಹಕಾರಿಯಾಗಿದೆ.
ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಡಾ. ಪೆಮ್ಮಸಾನಿ ಚಂದ್ರಶೇಖರ್ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರದ ಕುರಿತು ರಾಜ್ಯಸಭೆಯಲ್ಲಿ ಉತ್ತರವನ್ನು ನೀಡಿದ್ದಾರೆ. ದೇಶದ 23 ವಲಯಗಳಲ್ಲಿ 452 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಕಳೆದ 3 ವರ್ಷಗಳಲ್ಲಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರಗಳು ಸೇರಿದಂತೆ ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಗಳ ವಿವರಗಳನ್ನು ನೀಡಿದ್ದಾರೆ. 2023 ರಲ್ಲಿ 35,05,818, 2024ರಲ್ಲಿ 32,38,811 ಮತ್ತು 2025ರಲ್ಲಿ 39,59,325 ಪಾಸ್‌ಪೋರ್ಟ್ ಅರ್ಜಿಗಳು ಸ್ವೀಕೃತವಾಗಿವೆ.
ಪಾಸ್‌ಪೋರ್ಟ್ ಲಭ್ಯತೆಯ ಮೇಲೆ POPSK ವಿಸ್ತರಣೆಯನ್ನು ಮೌಲ್ಯಮಾಪನ ಮಾಡಲು ಸಚಿವಾಲಯವು ಸಮೀಕ್ಷೆಗಳನ್ನು ನಡೆಸಿದೆ. ಈ ಮೂಲಕ ನಾಗರಿಕರಿಗೆ ಪ್ರಯಾಣದ ದೂರ, ಸಮಯ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಕಂಡುಬಂದಿದೆ.
POPSKಗಳು ದೇಶಾದ್ಯಂತ ಪಾಸ್‌ಪೋರ್ಟ್ ಸೇವೆಗಳನ್ನು ಹೆಚ್ಚು ಒಳಗೊಳ್ಳುವಂತೆ, ಜನಸಾಮಾನ್ಯರಿಗೆ ಕೈಗೆಟುಕುವಂತೆ ಮತ್ತು ನಾಗರಿಕ ಕೇಂದ್ರಿತವಾಗುವಂತೆ ಮಾಡಿವೆ. ಕರ್ನಾಟಕದಲ್ಲಿ 23 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿವೆ.
452 ಕೇಂದ್ರಗಳ ಪೈಕಿ ಪಶ್ಚಿಮ ಬಂಗಾಳ 41, ಉತ್ತರಾಖಂಡ್ 6, ಆಂಧ್ರ ಪ್ರದೇಶ 21, ಅಸ್ಸಾಂ 15, ಬಿಹಾರ 37, ಗುಜರಾಜ್ 25, ಹರ್ಯಾಣ 11, ಜಾರ್ಖಂಡ್ 15, ಮಧ್ಯಪ್ರದೇಶ 25, ಮಹಾರಾಷ್ಟ್ರ 42 ಕಚೇರಿಗಳನ್ನು ಹೊಂದಿದೆ.

