HomeKarnatakaಮದ್ಯ ಖರೀದಿಗೆ ಕನಿಷ್ಠ ವಯಸ್ಸಿನ ಮಿತಿ; ಮಹತ್ವದ ತೀರ್ಮಾನ ಕೈಗೊಂಡ ಅಬಕಾರಿ ಇಲಾಖೆ

ಮದ್ಯ ಖರೀದಿಗೆ ಕನಿಷ್ಠ ವಯಸ್ಸಿನ ಮಿತಿ; ಮಹತ್ವದ ತೀರ್ಮಾನ ಕೈಗೊಂಡ ಅಬಕಾರಿ ಇಲಾಖೆ

ಮದ್ಯ ಖರೀದಿಗೆ ಕನಿಷ್ಠ 21 ವರ್ಷಗಳಾಗಿರಬೇಕು ಎಂಬ ನಿಯಮ ರಾಜ್ಯದಲ್ಲಿದೆ. ಇದನ್ನು 18 ವರ್ಷಗಳಿಗೆ ಇಳಿಸಲು ಅಬಕಾರಿ ಇಲಾಖೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಇದಕ್ಕೆ ಪುಷ್ಟಿ ನೀಡುವಂತೆ ಅಬಕಾರಿ ಇಲಾಖೆಯು ಜನವರಿ 9 ರಂದು ಕರಡು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದ್ದು, ಇದರಲ್ಲಿ ಮದ್ಯ ಖರೀದಿಗೆ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸುವ ಸೆಕ್ಷನ್ ಗೆ ತಿದ್ದುಪಡಿ ಮಾಡುವ ಪ್ರಸ್ತಾವವನ್ನು ಸೇರಿಸಿತ್ತು.

ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಮದ್ಯ ಖರೀದಿಗೆ ಕನಿಷ್ಠ ವಯಸ್ಸಿನ ಮಿತಿ ನಿಗದಿಪಡಿಸುವ ಕುರಿತಂತೆ ಅಬಕಾರಿ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಿರುವ ಮದ್ಯ ಖರೀದಿಯ ಕನಿಷ್ಠ ವಯಸ್ಸಿನ ಮಿತಿ 21 ವರ್ಷಗಳನ್ನೇ ಮುಂದುವರಿಸಲು ತೀರ್ಮಾನಿಸಲಾಗಿದ್ದು, ಇದನ್ನು 18 ವರ್ಷಕ್ಕೆ ಇಳಿಸುವ ಪ್ರಸ್ತಾವನೆಯಿಂದ ಹಿಂದೆ ಸರಿದಿದೆ.

For Latest News Updates, Join Our Whatsapp Community🚩
RELATED ARTICLES

Most Popular