HomeKarnatakaಕರ್ನಾಟಕ ಸರ್ಕಾರಿ ನೌಕರರ ಸ್ಯಾಲರಿ ಪ್ಯಾಕೇಜ್ ಖಾತೆ: ಅಪ್‌ಡೇಟ್

ಕರ್ನಾಟಕ ಸರ್ಕಾರಿ ನೌಕರರ ಸ್ಯಾಲರಿ ಪ್ಯಾಕೇಜ್ ಖಾತೆ: ಅಪ್‌ಡೇಟ್

ಕರ್ನಾಟಕ ಸರ್ಕಾರ ಎಲ್ಲ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ವಿವಿಧ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ‘ಸಂಬಳ ಪ್ಯಾಕೇಜ್‌ ಖಾತೆ’ ತೆರೆಯುವುದನ್ನು ಕಡ್ಡಾಯ ಮಾಡಿ ಆರ್ಥಿಕ ಇಲಾಖೆ ಮೂಲಕ ಆದೇಶ ಹೊರಡಿಸಿದೆ. ಆದರೆ ಇನ್ನೂ ಹಲವಾರು ನೌಕರರು ಖಾತೆ ತೆರೆದಿಲ್ಲ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ (ಆರ್ಥಿಕ ಸುಧಾರಣೆಗಳು) ಡಾ. ವಿಶಾಲ್ ಆರ್. ಅವರನ್ನು ಭೇಟಿ ಮಾಡಿತ್ತು.

ಈ ನಿಯೋಗದಲ್ಲಿ  ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ, ಉಪಾಧ್ಯಕ್ಷ ಡಾ. ಸದಾನಂದ ನೆಲಕುದ್ರಿ, ಚೇತನ್ ರಾಜು ಹಾಗೂ ರಾಜ್ಯ ಪರಿಷತ್ ಸದಸ್ಯ ಜ್ಞಾನಪ್ರಕಾಶ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ವಿಚಾರಗಳ ಕುರಿತು ಚರ್ಚೆ: ಈ ಭೇಟಿ ಸಂದರ್ಭದಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆದಲಾಯಿತು. ಮನವಿಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ ಆರ್ಥಿಕ ಕಾರ್ಯದರ್ಶಿಗಳು, ಸಭೆಯಲ್ಲಿ ಹಾಜರಿದ್ದ ಬ್ಯಾಂಕ್ ಅಧಿಕಾರಿಗಳಿಗೆ ಎಲ್ಲಾ ಅಂಶಗಳನ್ನು ಕೂಡಲೇ ಅನುಷ್ಠಾನಗೊಳಿಸುವ ಸಂಬಂಧ ನಿರ್ದೇಶನ ನೀಡಿದರು.

* ಸರ್ಕಾರಿ ನೌಕರ ಸ್ಯಾಲರಿ ಪ್ಯಾಕೇಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಸಂಬಂಧ ಚರ್ಚೆ.

* ಬ್ಯಾಂಕ್ ಸಿಬ್ಬಂದಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಸೂಕ್ತ ಮಾಹಿತಿ ನೀಡುವುದು.

* ಸರಿಯಾದ ಚೆಕ್ ಲಿಸ್ಟ್ ಕಳುಹಿಸುವುದು

* ಮರಣ ಸಂಬಂಧ ಪ್ರಕರಣಗಳನ್ನು ಬ್ಯಾಂಕ್‌ನಿಂದಲೇ ಸ್ವಯಂ ಚಾಲಿತವಾಗಿ ಪ್ರಾರಂಭಿಸುವುದು

* ರಾಜ್ಯ ಸರ್ಕಾರದ ಬದಲಾಗಿ ಕೇಂದ್ರ ಸರ್ಕಾರದ ಪ್ಯಾಕೇಜ್ ಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular