HomeKarnatakaಹಾಸನದಲ್ಲಿ ಬಿಜೆಪಿಗೆ 1 ಲಕ್ಷಕ್ಕೂ ಅಧಿಕ ಮತ; ಪ್ರೀತಂ ಗೌಡ ವಿಶ್ವಾಸ

ಹಾಸನದಲ್ಲಿ ಬಿಜೆಪಿಗೆ 1 ಲಕ್ಷಕ್ಕೂ ಅಧಿಕ ಮತ; ಪ್ರೀತಂ ಗೌಡ ವಿಶ್ವಾಸ

ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಶುಕ್ರವಾರದಂದು ಬೃಹತ್ ರೋಡ್ ಶೋ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ವಿಶ್ವಾಸದಿಂದ ಬೀಗುತ್ತಿರುವ ಅವರು ಹಾಸನದಲ್ಲಿ ಬಿಜೆಪಿಗೆ 1 ಲಕ್ಷಕ್ಕೂ ಅಧಿಕ ಮತ ಬರುವುದು ನಿಶ್ಚಿತ ಎಂದಿದ್ದಾರೆ.

ಹಾಸನ ಅಖಾಡದಲ್ಲಿ ನನಗೆ ಜೆಡಿಎಸ್ ನೈಜ ಎದುರಾಳಿಯಾಗಿದ್ದು, ಎರಡನೇ ಸ್ಥಾನಕ್ಕಾಗಿ ಉಳಿದೆರಡು ಪಕ್ಷಗಳು ಪೈಪೋಟಿ ನಡೆಸಬೇಕಿದೆ. ಈ ಬಾರಿಯೂ ಹಾಸನ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನದಲ್ಲಿ ಲೂಟಿಯಾಗುತ್ತಿದೆ ಎಂಬ ಎಚ್.ಡಿ. ರೇವಣ್ಣನವರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಹೌದು, ನಾನು ಜನರ ಪ್ರೀತಿ, ವಿಶ್ವಾಸ ಲೂಟಿ ಮಾಡಿದ್ದೇನೆ. ಶುಕ್ರವಾರದಂದು ನನ್ನ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular