HomeKarnatakaBIG NEWS: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ; 5 ಲಕ್ಷ ಹಣ ಸುಟ್ಟು...

BIG NEWS: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ; 5 ಲಕ್ಷ ಹಣ ಸುಟ್ಟು ಭಸ್ಮ

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ಶಾಖೆಯ ಎಟಿಎಂ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಚಿಕ್ಕಮಗಳೂರಿನ ಐಜಿ ರಸ್ತೆಯ ಸಾರಗೋಡು ಆರ್ಕೆಡ್ ಬಳಿ ನಡೆದಿದೆ.

ಬ್ಯಾಂಕ್ ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂ ಗೆ ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ, ಎಟಿಎಂ ಯಂತ್ರ ಸೇರಿದಂತೆ ಒಟ್ಟು 15 ಲಕ್ಷ ಮೌಲ್ಯದ ಎಟಿಎಂ ಸಂಪೂರ್ನ ಭಸ್ಮವಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular