HomeKarnatakaBIG UPDATE: ಕಾರವಾರದಲ್ಲಿ ಉದ್ಯಮಿ ಹತ್ಯೆ ಪ್ರಕರಣ: ತನಿಖೆಗೆ ಡಿವೈಎಸ್ ಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ...

BIG UPDATE: ಕಾರವಾರದಲ್ಲಿ ಉದ್ಯಮಿ ಹತ್ಯೆ ಪ್ರಕರಣ: ತನಿಖೆಗೆ ಡಿವೈಎಸ್ ಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ

ಕಾರವಾರ: ಕಾರವಾರದಲ್ಲಿ ಉದ್ಯಮಿ ವಿನಾಯಕ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಡಿವೈಎಸ್ ಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಎಸ್ ಪಿ ನಾರಾಯಣ ತಿಳಿಸಿದ್ದಾರೆ.

ಉದ್ಯಮಿ ವಿನಾಯಕ್ ಹಾಗೂ ಅವರ ಪತ್ನಿ ಪುಣೆಯಿಂದ ಊರಿಗೆ ಬಂದಿದ್ದರು. ವಿನಾಯಕ್ ಅವರ ತಾಯಿಯ ತಿಥಿ ಕಾರ್ಯಕ್ಕೆಂದು ಬದಿದ್ದು, ನಿನ್ನೆ ತಿಥಿ ಕಾರ್ಯ ಮುಗಿಸಿದ್ದರು. ಇಂದು ಬೆಳಿಗ್ಗೆ ಪುಣೆಗೆ ವಾಪಾಸ್ ಆಗಲು ರೆಡಿಯಾಗಿದ್ದರು. ಈ ವೇಳೆ ಬೆಳಿಗ್ಗೆ 5:30ರ ಸುಮಾರಿಗೆ 4-5 ಜನರಿದ್ದ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ವಿನಾಯಕ ನಾಯ್ಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಈ ವೇಳೆ ಬಾತ್ ರೂಮಿನಲ್ಲಿದ್ದ ವಿನಾಯಕ ಅವರ ಪತ್ನಿ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವ್ಯಾಪಾರದ ಕಾರಣಕ್ಕಾಗಿ ಕೊಲೆ ನಡೆದಿರುವ ಶಂಕೆ ಇದೆ. ಆದರೆ ವಿನಾಯಕ ಅವರದ್ದು ಕಾರವಾರದಲ್ಲಿ ಯಾವುದೇ ಉದ್ಯಮ ಇರಲಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular