HomeCrimeಹಾಡಹಗಲೇ ಯುವತಿಗೆ ಖಾಸಗಿ ಅಂಗ ತೋರಿಸಿದ ಪಾಪಿ: ಕರಾಚಿಯ ಶಾಕಿಂಗ್ ವಿಡಿಯೋ ವೈರಲ್

ಹಾಡಹಗಲೇ ಯುವತಿಗೆ ಖಾಸಗಿ ಅಂಗ ತೋರಿಸಿದ ಪಾಪಿ: ಕರಾಚಿಯ ಶಾಕಿಂಗ್ ವಿಡಿಯೋ ವೈರಲ್

ಈ ಸಿಸಿಟಿವಿ ದೃಶ್ಯ ನೋಡ್ತಿದ್ರೆ, ಕೆಲ ನೀಚ ಗಂಡಸರ ಮನಃಸ್ಥಿತಿ ಹೇಗ್ಹೇಗಿರುತ್ತೆ ಅನ್ನೊದಕ್ಕೆ ಸಾಕ್ಷಿಯಾಗಿದೆ.

ಇದು‌ ಪಾಕಿಸ್ತಾನದ ಕರಾಚಿಯ ಗುಲಿಸ್ತಾನ್-ಇ-ಚೌಹರ್‌ನಲ್ಲಿ ನಡೆದ ಘಟನೆ. ಈ ಸಿಸಿ ಟಿವಿ ದೃಶ್ಯದಲ್ಲಿ ಗಮನಿಸೋ ಹಾಗೆ, ಬೈಕ್‌ನಲ್ಲಿ ಬಂದ ವ್ಯಕ್ತಿ ಯಾರೂ ಇಲ್ಲದ್ದನ್ನ ನೋಡಿ, ಅಲ್ಲೇ ಇದ್ದ ಗಿಡಗಂಟಿಗಳ ಮಧ್ಯದಲ್ಲಿ ತನ್ನ ಒಳ ಉಡುಪನ್ನ ತೆಗೆದು ನಿಂತಿದ್ದಾನೆ.

ಕೆಲ ಸೆಕೆಂಡ್ ನಂತರ, ಅದೇ ದಾರಿಯಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ಬರುತ್ತಾಳೆ. ಆಕೆಯನ್ನ ನೋಡಿದಾಕ್ಷಣ ಈ ಪಾಪಿ ಆಕೆಗೆ ತನ್ನ ಖಾಸಗಿ ಅಂಗ ತೋರಿಸುತ್ತಾ ಆಕೆಯ ಮೇಲೆ ಲೈಂಗಿಕ ಹಲ್ಲೆ ಮಾಡಲು ಯತ್ನಿಸುತ್ತಾನೆ. ಅಸಲಿಗೆ ಆತನ ದುರುದ್ದೇಶ ಅತ್ಯಾಚಾರ ಮಾಡುವುದಾಗಿತ್ತು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೃಷ್ಟವಶಾತ್ ತನ್ನ ಮೇಲೆ ಕೌರ್ಯ ನಡೆಯುತ್ತಿದೆ ಅನ್ನೊದನ್ನ ಅರಿವು ಬಂದಾಕ್ಷಣ ಆಕೆ ಜೋರಾಗಿ ಕೂಗಿದ್ದಾಳೆ. ಅದನ್ನು ನಿರೀಕ್ಷೆ ಮಾಡದ ಆತ, ಆಕೆಯನ್ನ ಬಿಟ್ಟು ಮತ್ತೆ ಬಂದು ಒಳ ಉಡುಪು ಧರಿಸಿ, ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಅಲ್ಲಿನ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಕೂಡ ಇದು ’ನಾಚಿಕೆಗೇಡಿನ ಕೃತ್ಯ’ ಎಂದು ಹೇಳಿದ್ದಾರೆ. ಅಲ್ಲದೇ ತಕ್ಷಣವೇ ಆ ವ್ಯಕ್ತಿಯನ್ನ ಬಂಧಿಸಲು ಆದೇಶಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular