HomeEntertainment'ಬ್ಲಿಂಕ್' ಚಿತ್ರದ ''ಕಣ್ಣಲ್ಲಿ ನೂರು'' ಹಾಡು ರಿಲೀಸ್

‘ಬ್ಲಿಂಕ್’ ಚಿತ್ರದ ”ಕಣ್ಣಲ್ಲಿ ನೂರು” ಹಾಡು ರಿಲೀಸ್

ಶ್ರೀನಿಧಿ ಬೆಂಗಳೂರು ನಿರ್ದೇಶನದ ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಲಿಂಕ್’ ಚಿತ್ರ ಬಿಡುಗಡೆ ಆದಾಗಿನಿಂದ ರಾಜ್ಯದಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಈ ಸಿನಿಮಾ ಕಥೆಗೆ ಪ್ರೇಕ್ಷಕ ಪ್ರಭುಗಳು ಬಹುಪರಾಕ್ ಎಂದಿದ್ದಾರೆ.’ಬ್ಲಿಂಕ್’ ಚಿತ್ರದ ‘ಕಣ್ಣಲ್ಲಿ ನೂರು ಅವಿತಿರೋ ಸಾಲು’ ಎಂಬ ಹಾಡನ್ನು ಜನನಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಸುನಿಧಿ ಗಣೇಶ್ ಧ್ವನಿಯಾಗಿದ್ದು, ದೀಪಾ ಭಾರತಿ ಸಾಹಿತ್ಯವಿದೆ.

ಈ ಚಿತ್ರವನ್ನು ರವಿಚಂದ್ರ ಎಜೆ ನಿರ್ಮಾಣ ಮಾಡಿದ್ದು, ದೀಕ್ಷಿತ್ ಶೆಟ್ಟಿ ಸೇರಿದಂತೆ ಚೈತ್ರ ಜೆ ಆಚಾರ್, ಸುರೇಶ್ ಅಂಜಲಿ, ವಜ್ರಂದೀರ್ ಜೈನ್, ಮಂದಾರ ಭಟ್ಟಳಹಳ್ಳಿ, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯಕ್,  ಬಣ್ಣ ಹಚ್ಚಿದ್ದಾರೆ. ಸಂಜೀವ್ ಜಗಿರ್ದಾರ್ ಸಂಕಲನ. ಪ್ರಸನ್ನ ಕುಮಾರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular