HomeLatest Newsಅಂಬೇಡ್ಕರ್ ನೀಲಿ ಧ್ವಜವನ್ನೇ ತಳ್ಳಿಹಾಕಿಬಿಟ್ರಲ್ಲ: ಡಿಎಂಕೆ ಸಂಸದೆ ಕೊಟ್ಟ ಕೌಂಟರ್‌ಗೆ ಮಾತಿಲ್ಲದೇ ಕುಳಿತ ಸ್ಪೀಕರ್; ವಿಡಿಯೊ

ಅಂಬೇಡ್ಕರ್ ನೀಲಿ ಧ್ವಜವನ್ನೇ ತಳ್ಳಿಹಾಕಿಬಿಟ್ರಲ್ಲ: ಡಿಎಂಕೆ ಸಂಸದೆ ಕೊಟ್ಟ ಕೌಂಟರ್‌ಗೆ ಮಾತಿಲ್ಲದೇ ಕುಳಿತ ಸ್ಪೀಕರ್; ವಿಡಿಯೊ

ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನಿನ್ನೆ ( ಏಪ್ರಿಲ್ 17 ) ಸೋಲಾಗಿದೆ.

ಪಂಚ ರಾಜ್ಯಗಳ ಚುನಾವಣೆ ಹೊತ್ತಿನಲ್ಲೇ ಎನ್‌ಡಿಎ ಈ ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದು, ಚಲಾವಣೆಯಾದ 489 ಮತಗಳ ಪೈಕಿ ಪರವಾಗಿ 278 ಮತಗಳು, ವಿರುದ್ಧವಾಗಿ 211 ಚಲಾವಣೆಯಾದವು. 71 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು. ಇನ್ನು ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಇಂಡಿ ಅಲಯನ್ಸ್ ಸದಸ್ಯರು ಸದನದಲ್ಲಿ ಸಂಭ್ರಮಿಸಿದರು.

ಅದರಲ್ಲೂ ತಮಿಳುನಾಡಿನ ಡಿಎಂಕೆ ಸಂಸದರು ತುಸು ಹೆಚ್ಚೇ ಸಂಭ್ರಮಾಚರಣೆ ಮಾಡಿದರು. ತಮಿಳುನಾಡು ಸಿಎಂ ಸ್ಟಾಲಿನ್ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿಯನ್ನು ಚೆನ್ನೈ ಸೋಲಿಸಿತು ಎಂದು ಬರೆದುಕೊಂಡು ಮಸೂದೆಯ ಪ್ರತಿಯನ್ನು ಸುಡುವ ಫೋಟೊವನ್ನು ಹಂಚಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಮಸೂದೆಯ ವಿರುದ್ಧ ಸ್ಟಾಲಿನ್ ಎರಡು ವರ್ಷಗಳಿಂದ ದನಿ ಎತ್ತುತ್ತಾ ಬಂದಿದ್ದರು. ಇದರಿಂದ ಉತ್ತರ ಭಾರತಕ್ಕೆ ಹೆಚ್ಚು ಸ್ಥಾನಗಳು ಸಿಗಲಿದ್ದು, ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂದು ಹೇಳಿಕೆ ನೀಡಿ ಮಸೂದೆಯನ್ನು ವಿರೋಧಿಸಿದ್ದರು. ಸ್ಟಾಲಿನ್‌ ಬಳಿಕ ಕರ್ನಾಟಕ, ತೆಲಂಗಾಣ ಹಾಗೂ ಕೇರಳ ರಾಜ್ಯಗಳು ಸಹ ಈ ಮಸೂದೆಯನ್ನು ವಿರೋಧಿಸಲಾರಂಭಿಸಿದವು.

ಮಸೂದೆ ಮಂಡನೆ ಸಮೀಪಿಸುತ್ತಿದ್ದಂತೆ ಇದರ ವಿರುದ್ಧದ ಪ್ರತಿಭಟನೆ ಜೋರಾದವು. ತಮಿಳುನಾಡಿನಲ್ಲಿ ಸ್ಟಾಲಿನ್ ಮಸೂದೆ ಪ್ರತಿಯನ್ನು ಸುಟ್ಟರು ಹಾಗೂ ಕಪ್ಪು ಬಾವುಟವನ್ನು ಹಾರಿಸಿ ಪ್ರತಿಭಟಿಸಿದರು.

ಈ ವಿಷಯವನ್ನು ಸದನದಲ್ಲಿ ಡಿಎಂಕೆ ಸಂಸದರು ಉಲ್ಲೇಖಿಸಿದಾಗ ಸ್ಪೀಕರ್ ಓಂ ಬಿರ್ಲಾ ಅವರು ಕಪ್ಪು ಬಾವುಟವನ್ನಾದರೂ ಹಾರಿಸಲಿ ಅಥವಾ ನೀಲಿ ಬಣ್ಣದ ಬಾವುಟವನ್ನಾದರೂ ಹಾರಿಸಲಿ ಎಂದು ಹೇಳಿಕೆಯನ್ನು ಕಡೆಗಣಿಸಿದ್ದರು.

ಇದಕ್ಕೆ ಕೌಂಟರ್ ಕೊಡಲು ಮುಂದಾದ ಡಿಎಂಕೆ ಸಂಸದೆ ಕನಿಮೊಳಿ ‘ನಿನ್ನೆ ನಮ್ಮ ಪಕ್ಷದ ಸಂಸದರು ನಮ್ಮ ನಾಯಕ ಸ್ಟಾಲಿನ್ ಕಪ್ಪು ಬಾವುಟ್ ಹಾರಿಸಿ ಮಸೂದೆಯನ್ನು ವಿರೋಧಿಸಿದ್ದಾರೆ ಎಂದು ಹೇಳಿದಾಗ ನೀವು ಕಪ್ಪು ಬಾವುಟ ಅಥವಾ ನೀಲಿ ಬಾವುಟವಾಗಲಿ ಮುಖ್ಯವಾಗುವುದಿಲ್ಲ ಎಂದು ತಿರಸ್ಕರಿಸಿ ತಳ್ಳಿಹಾಕಿದ್ರಿ. ಕಪ್ಪು ಬಾವುಟ ಪ್ರತಿಭಟನೆಯ ಚಿಹ್ನೆ, ನಾವು ಹೋರಾಡುತ್ತೇವೆ, ಬಿಟ್ಟುಕೊಡುವುದಿಲ್ಲ ಎಂದು ಹೇಳುವುದರ ಚಿಹ್ನೆ. ಹಾಗೆಯೇ ನಿಮಗೆ ನಾನು ಒಂದನ್ನು ನೆನಪಿಸಲು ಇಚ್ಛಿಸುತ್ತೇನೆ. ನೀಲಿ ಬಣ್ಣದ ಬಾವುಟವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಪಕ್ಷದ ಬಾವುಟವನ್ನಾಗಿ ಆರಿಸಿಕೊಂಡಿದ್ದರು. ಅದೇ ನೀಲಿ ಬಣ್ಣವನ್ನು ನೀವು ತಿರಸ್ಕರಿಸಿದ್ದೀರ. ಆ ಮನುಷ್ಯ ನಮಗೆ ವಿದ್ಯಾವಂತರಾಗಿ ಎಂದು ತಿಳಿಸಿದವರು. ಭಾರತದ ಸಂವಿಧಾನವನ್ನು ಬರೆದವರು. ಅದೇ ಸಂವಿಧಾನವನ್ನು ನೀವು ದುರ್ಬಲಗೊಳಿಸಲು ಯತ್ನಿಸುತ್ತಿದ್ದೀರ, ನಾವು ಅದನ್ನು ಕಾಪಾಡಲು ನಿಂತಿದ್ದೇವೆ’ ಎಂದು ಹೇಳಿಕೆ ನೀಡಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular