HomeEntertainmentಸಚಿವ ಚಿರಾಗ್ ಪಾಸ್ವಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಕಂಗನಾ? ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ

ಸಚಿವ ಚಿರಾಗ್ ಪಾಸ್ವಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಕಂಗನಾ? ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ

ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಚಿರಾಗ್ ಪಾಸ್ವಾನ್ ನನ್ನ ಒಳ್ಳೆಯ ಗೆಳೆಯ ಮಾತ್ರ ಎಂದು ಕಂಗನಾ ರಣಾವತ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ಎಎನ್ಐ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅವರು, ಚಿರಾಗ್ ಮತ್ತು ನನ್ನ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. 2011ರಲ್ಲಿ ‘ಮಿಲೇ ನಾ ಮಿಲೇ ಹಮ್’ ಎಂಬ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಆ ಸಮಯದ ಸ್ನೇಹ ಈಗಲೂ ಮುಂದುವರಿಯುತ್ತಿದೆ ಅಷ್ಟೇ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ತಮಾಷೆಯಾಗಿ ಉತ್ತರಿಸಿದ ಕಂಗನಾ, “ನಮ್ಮಿಬ್ಬರ ನಡುವೆ ಒಂದು ವೇಳೆ ಪ್ರೇಮ ಪ್ರಸಂಗ ನಡೆಯಬೇಕಿದ್ದಿದ್ದರೆ ಅದು ಹತ್ತು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಒಂದು ವೇಳೆ ಹಾಗೇನಾದರೂ ಆಗಿದ್ದಿದ್ದರೆ ಇಂದು ನಮಗೆ ಮಕ್ಕಳೇ ಇರುತ್ತಿದ್ದರು” ಎಂದು ನಗುತ್ತಾ ಉತ್ತರಿಸುವ ಮೂಲಕ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಚಿರಾಗ್ ಪಾಸ್ವಾನ್ ಅವರನ್ನು ನೋಡಿದಾಗಲೆಲ್ಲಾ ನನಗೆ ಒಬ್ಬ ಆತ್ಮೀಯ ಗೆಳೆಯನಂತೆ ಕಾಣುತ್ತಾರೆಯೇ ಹೊರತು ಬೇರೆ ಯಾವುದೇ ಭಾವನೆಗಳಿಲ್ಲ ಎಂದು ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಹಾಲಿವುಡ್ ಸಿನಿಮಾಗಳ ಬಗ್ಗೆಯೂ ಮಾತನಾಡಿದ ಕಂಗನಾ, “ನನಗೆ ಹಾಲಿವುಡ್ ಸಿನಿಮಾಗಳ ಬಗ್ಗೆ ಅಷ್ಟೊಂದು ಆಸಕ್ತಿಯಿಲ್ಲ. ಅಮೆರಿಕಾವನ್ನು ದೊಡ್ಡದಾಗಿ ಬಿಂಬಿಸುವ ಕಾರ್ಯಸೂಚಿ ಅವರ ಸಿನಿಮಾಗಳಲ್ಲಿರುತ್ತದೆ. ಅದರ ಬದಲಾಗಿ ಭಾರತದ ಹಿರಿಮೆಯನ್ನು ಸಾರುವ ಮತ್ತು ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ತಮವಾಗಿ ತೋರಿಸುವ ಸಿನಿಮಾಗಳನ್ನು ಮಾಡುವುದು ನನಗೆ ಹೆಚ್ಚು ಇಷ್ಟ” ಎಂದು ತಿಳಿಸಿದ್ದಾರೆ. ಸದ್ಯಕ್ಕೆ ತಾವು ಭಾರತೀಯ ಚಿತ್ರರಂಗದಲ್ಲಿಯೇ ಸಂತೋಷವಾಗಿರುವುದಾಗಿ ಕಂಗನಾ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕ ಸಮಾರಂಭಗಳಲ್ಲಿ ಮತ್ತು ಸಂಸತ್ತಿನ ಆವರಣದಲ್ಲಿ ಇವರಿಬ್ಬರು ಪರಸ್ಪರ ನಗುತ್ತಾ ಮಾತನಾಡುತ್ತಿದ್ದ ದೃಶ್ಯಗಳನ್ನು ಕಂಡು ನೆಟ್ಟಿಗರು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಆದರೆ ಈಗ ಕಂಗನಾ ಅವರ ಈ ನೇರ ಮಾತುಗಳು ಎಲ್ಲಾ ಊಹಾಪೋಹಗಳಿಗೆ ಮದ್ದು ಅರೆದಂತಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular