HomeKarnatakaBIG NEWS: ಸ್ನೇಹಿತನನ್ನೇ ಕೊಂದ ಗೆಳೆಯರು; ಮೂವರು ಆರೋಪಿಗಳು ಅರೆಸ್ಟ್

BIG NEWS: ಸ್ನೇಹಿತನನ್ನೇ ಕೊಂದ ಗೆಳೆಯರು; ಮೂವರು ಆರೋಪಿಗಳು ಅರೆಸ್ಟ್

ಕಲಬುರ್ಗಿ: ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ.

ರೋಹನ್ ಕೊಲೆಯಾದ ದುರ್ದೈವಿ. ನಾಲ್ವರು ಗೆಳೆಯರು ಸೇರಿ ರೋಹನ್ ನನ್ನು ಚಾಕುವಿನಿಂದ ಇರುದು ಹತ್ಯೆಗೈದಿದ್ದರು. ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುನೀಲ್ ಸಿಂಗ್, ಭಗತ್ ಸಿಂಗ್, ಸೊಹೆಲ್ ಬಂಧಿತ ಆರೋಪಿಗಳು. ಓರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಹನ್ ನಿಂದ ಗೆಳೆಯರು 2-3 ಸಾವಿರ ರೂಪಾಯಿ ಹಣ ಪಡೆದಿದ್ದರು. ತಿಂಗಳು ಕಳೆದರೂ ಕೊಟ್ಟ ಹಣವನ್ನು ವಾಪಾಸ್ ಕೊಟ್ಟಿರಲಿಲ್ಲ. ಫೆ.6ರಂದು ರೋಹನ್ ತನ್ನ ಸ್ನೇಹಿತರಿಗೆ ಹಣ ಹಿಂದಿರುಗಿಸುವಂತೆ ತಾಕೀತು ಮಾಡಿದ್ದನಂತೆ. ಇದೇ ವಿಚಾರವಾಗಿ ಸುನೀಲ್ ಸಿಂಗ್ ಹಾಗೂ ಗ್ಯಾಂಗ್ ರೋಹನ್ ನಂದು ಮನೆಯಿಂದ ಹೊರಗೆ ಬರುವಂತೆ ಕರೆದು ಚಿಂಚೋಳಿ ಕ್ರಾಸ್ ಬಳಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular