HomeLatest NewsBIG NEWS: ಸರಡಗಿ ಬ್ರಿಡ್ಜ್ ಬಳಿ ದುರಂತ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ಭೀಮಾನದಿ ನೀರು...

BIG NEWS: ಸರಡಗಿ ಬ್ರಿಡ್ಜ್ ಬಳಿ ದುರಂತ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ಭೀಮಾನದಿ ನೀರು ಪಾಲು

ಕಲಬುರಗಿ: ಭೀಮಾ ನದಿಯಲ್ಲಿ ಈಜಲು ಇಳಿದಿದ್ದ ಯುವಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸರಡಗಿ ಬ್ರಿಡ್ಜ್ ಬಳಿ ನಡೆದಿದೆ.

20 ವರ್ಷದ ಮಹದೇವ್ ನೀರುಪಾಲಾಗಿರುವ ಯುವಕ. ಕಲಬುರಗಿಯಿಂದ ಐದು ಜನರ ಸ್ನೇಹಿತರ ಜೊತೆ ಭೀಮಾನದಿಗೆ ಈಜಲು ತೆರಳಿದ್ದ. ಈ ವೇಳೆ ಈಜು ಬಾರದಿದ್ದರೂ ನದಿಗೆ ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಯುವಕನಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular