HomeKarnatakaಪಡಿತರ ಅಕ್ಕಿ ದಂಧೆಕೋರರ ಜತೆ ಡೀಲ್, ನಾಲ್ವರು ಪೊಲೀಸರು ಸಸ್ಪೆಂಡ್

ಪಡಿತರ ಅಕ್ಕಿ ದಂಧೆಕೋರರ ಜತೆ ಡೀಲ್, ನಾಲ್ವರು ಪೊಲೀಸರು ಸಸ್ಪೆಂಡ್

ಕಲಬುರಗಿ: ಪಡಿತರ ಅಕ್ಕಿ ದಂಧೆ ಕೋರರ ಜೊತೆಯೇ ಶಾಮೀಲಾಗಿ ಡೀಲ್ ಮಾಡಿಕೊಂಡಿದ್ದ ಪ್ರಕರಣದಲ್ಲಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಲಾರಿಯನ್ನು ಜಪ್ತಿ ಮಾಡಿದ ನಂತರ ದಂಧೆಕೋರರೊಂದಿಗೆ ಶಾಮೀಲಾಗಿ ವಾಹನ ಬಿಟ್ಟು ಕಳುಹಿಸಿದ ಆರೋಪದಡಿ, ಕಲಬುರಗಿಯ ಆಳಂದ ಪೊಲೀಸ್ ಠಾಣೆಯ ಸಿಪಿಐ ಶರಣಬಸಪ್ಪ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

112 ಸಿಬ್ಬಂದಿ ವಶಕ್ಕೆ ಪಡೆದು ಆಳಂದ ಟೌನ್ ಠಾಣೆಗೆ ಒಪ್ಪಿಸಿದ್ದ ಅಕ್ಕಿ ಲಾರಿಯನ್ನು ಕಳುಹಿಸಿಕೊಡಲು ಆರೋಪಿಗಳ ಜತೆ ಡೀಲ್ ಮಾಡಿಕೊಂಡಿದ್ದ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಅಡ್ಡೂರು ಶ್ರೀನಿವಾಸಲು ಅವರು ತನಿಖೆಗೆ ಆದೇಶಿಸಿದ್ದು, ತನಿಖೆಯಲ್ಲಿ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಪಿಐ ಶರಣಬಸಪ್ಪ ಹಾಗೂ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ (ಪಿಸಿ) ಹಣಮಂತ್, ಮಲ್ಲಿಕಾರ್ಜುನ ಮತ್ತು ಸಾಯಬಣ್ಣ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ನೈಸ್ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಸಿಎಂ ಡಿ.ಕೆ.ಶಿವಕುಮಾರ್ ಎಸ್ಐಆರ್ ನಾಟಕ: ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಹೆಚ್.ಡಿ.ಕೆ ಟೀಕೆ

ಬೆಂಗಳೂರು: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಆರಂಭದಲ್ಲಿ ವ್ಯಾಪಕ ಅಕ್ರಮ ಎಸಗಿದ ಕಾಂಗ್ರೆಸ್ ಈಗ ಅದರ ವಿರುದ್ಧ ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ಸಂಪುಟ ಸಭೆಯನ್ನೇ ಅಲಕ್ಷಿಸಿ ರಸ್ತೆಯಲ್ಲಿ ಕೂತು ನಡೆಸಿದ ಪ್ರಹಸನ ಹಾಸ್ಯಾಸ್ಪದ. ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಜನತೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ವೋಟ್ ಚೋರಿ ಎಂದು ಕಾಂಗ್ರೆಸ್ ಅನಗತ್ಯವಾಗಿ ರಂಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಇವರು ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಮನೆಗಳು ಸೇರಿ ನಾನಾ ಕಡೆ ಜನರನ್ನು ಗುಂಪುಗುಂಪಾಗಿ ಸೇರಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಿದ್ದನ್ನು ನೋಡಿದ್ದೇವೆ. ಅದರ ವಿರುದ್ಧ @JanataDal_S ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆಮೇಲೆ ಎನ್ ಡಿಎ ಮೈತ್ರಿಕೂಟದ ನಾಯಕರೆಲ್ಲರೂ ಹೋಗಿ ಆಯೋಗಕ್ಕೆ ಪಿರ್ಯಾದು ನೀಡಿದ್ದೇವೆ. ಆದರೂ ಅಕ್ರಮ ಎಸಗಿದ ಕಾಂಗ್ರೆಸ್ ಪಕ್ಷದವರೇ ‘ಅಕ್ರಮ ಅಕ್ರಮ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು ದೂರು ಕೊಟ್ಟಾಗ ಮೌನಕ್ಕೆ ಶರಣಾಗಿದ್ದ ಸರಕಾರ, ಈಗ ಮಾತನಾಡುತ್ತಿದೆ. ದೆಹಲಿ ನಾಯಕರು ಬಿಸಿ ಮುಟ್ಟಿಸಿದ ಮೇಲೆ ಇವರು ಈ ಪ್ರಹಸನ ಆರಂಭ ಮಾಡಿದ್ದಾರೆ ಎಂದರು.

3 ದಿನಗಳ ಹಿಂದೆ ನಾನು ನೈಸ್ ಯೋಜನೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ, ನೈಸ್ ಕಂಪನಿ ಜತೆ ಶಾಮೀಲಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು ಯೋಜನೆಯ ಭೂಮಿ ಲಪಟಾಯಿಸುವ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಮಾಡಿದ್ದೆ. ಆ ವಿಷಯ ರಾಜಕೀಯವಾಗಿ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ SIR ವಿಷಯ ಮುನ್ನೆಲೆಗೆ ತಂದಿದ್ದಾರೆ ಮುಖ್ಯಮಂತ್ರಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ!! ಎಂದು ಟಾಂಗ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular