
ತಮ್ಮ ನೇರ ಮಾತುಗಳ ಮೂಲಕವೇ ಹೆಚ್ಚು ಇಷ್ಟವಾಗುವ ಕಾಜೋಲ್ ಇತ್ತೀಚೆಗೆ ʼಪಠಾಣ್ʼ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುವ ಭರದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.
ಕಾಜೋಲ್ ಹಾಗೂ ಶಾರೂಕ್ಖಾನ್ ಆನ್ಸ್ಕ್ರೀನ್ನಲ್ಲಿ ಒಳ್ಳೆಯ ಕೆಮಿಸ್ಟ್ರಿ ಹೊಂದಿದ್ದು ಫಾರೆವರ್ ಫೇಮಸ್ ಜೋಡಿ ಎನಿಸಿದ್ದಾರೆ. ಆನ್ಸ್ಕ್ರೀನ್ ಹೊರತುಪಡಿಸಿ ಇವರಿಬ್ಬರೂ ಆಫ್ಸ್ಕ್ರೀನ್ನಲ್ಲಿಯೂ ಉತ್ತಮ ಸ್ನೇಹಿತರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೂ ಸ್ನೇಹಿತನ ಸಿನಿಮಾದ ಬಗ್ಗೆ ತಮಾಷೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಾಜೋಲ್ಗೆ ಶಾರೂಕ್ ಖಾನ್ ಬಗ್ಗೆ ಏನು ಹೇಳೋಕೆ ಇಚ್ಛಿಸುತ್ತೀರಿ…? ಎಂದು ಕೇಳಿದಾಗ ಜೋರಾಗಿ ನಕ್ಕ ಕಾಜೋಲ್, ಪಠಾಣ್ ಸಿನಿಮಾ ನಿಜಕ್ಕೂ ಎಷ್ಟು ಕಲೆಕ್ಷನ್ ಗಳಿಸುತ್ತಿದೆ..? ಎಂದು ಕೇಳುತ್ತೇನೆ ಎಂದಿದ್ದಾರೆ. ಸ್ನೇಹಿತನ ಯಶಸ್ಸನ್ನೇ ಆಡಿಕೊಂಡ ಕಾಜೋಲ್ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://twitter.com/i/status/1680421521943326720

