HomeEntertainmentಕೈಲಾಸ ಯಾತ್ರೆಯಲ್ಲಿ ಮೃತ್ಯುಂಜಯಿ: ಚೀನಾ ಭೂಕುಸಿತದಿಂದ ಪಾರಾಗಿ ಮುಂಬೈ ತಲುಪಿದ ನಟಿ ಮಾನಸಿ ಪಾರೇಕ್!

ಕೈಲಾಸ ಯಾತ್ರೆಯಲ್ಲಿ ಮೃತ್ಯುಂಜಯಿ: ಚೀನಾ ಭೂಕುಸಿತದಿಂದ ಪಾರಾಗಿ ಮುಂಬೈ ತಲುಪಿದ ನಟಿ ಮಾನಸಿ ಪಾರೇಕ್!

ಕೈಲಾಸ ಮಾನಸಸರೋವರ ಯಾತ್ರೆಯ ವೇಳೆ ಭೀಕರ ಪ್ರಕೃತಿ ವಿಕೋಪಕ್ಕೆ ಸಿಲುಕಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಪ್ರಸಿದ್ಧ ನಟಿ ಮಾನಸಿ ಪಾರೇಕ್ ಸುರಕ್ಷಿತವಾಗಿ ಮುಂಬೈ ತಲುಪಿದ್ದಾರೆ. ಈಶಾ ಫೌಂಡೇಶನ್ ಜೊತೆ ಯಾತ್ರೆ ಕೈಗೊಂಡಿದ್ದ ಅವರು, ಚೀನಾ ಮತ್ತು ನೇಪಾಳ ಗಡಿಯಲ್ಲಿ ಸಂಭವಿಸಿದ ದಿಢೀರ್ ಮೇಘಸ್ಫೋಟ ಹಾಗೂ ಭೂಕುಸಿತದ ನಡುವೆ ಭೀಕರ ಪರಿಸ್ಥಿತಿಯನ್ನು ಎದುರಿಸಿ ತಾಯ್ನಾಡಿಗೆ ಮರಳಿದ್ದಾರೆ.

ಟಿಬೆಟ್‌ನ ಗೈರಾಂಗ್ ಪೋರ್ಟ್‌ನಲ್ಲಿ ಸಂಭವಿಸಿದ ಪ್ರವಾಹಕ್ಕೆ ಕೆಲವೇ ಗಂಟೆಗಳ ಮೊದಲು ಮಾನಸಿ ಆ ಜಾಗದಿಂದ ಹೊರಟಿದ್ದರು. ಮಾರ್ಗ ಮಧ್ಯೆ ಭೂಕುಸಿತ ಉಂಟಾದ ಕಾರಣ ಬಸ್‌ನಲ್ಲೇ ನಾಲ್ಕು ಗಂಟೆಗಳ ಕಾಲ ಕಾಯಬೇಕಾಯಿತು. ಆ ನಂತರ ನೇಪಾಳ ಗಡಿಯಲ್ಲೂ ರಸ್ತೆ ಬಂದ್ ಆಗಿದ್ದರಿಂದ ಅಪಾಯಕಾರಿ ಹಾದಿಯಲ್ಲೇ ಕಾಲ್ನಡಿಗೆಯಲ್ಲಿ ಸಾಗಿ ಕಠ್ಮಂಡು ತಲುಪಿದ್ದರು. ಯುದ್ಧ ಗೆದ್ದು ಬಂದಂತೆ ಭಾಸವಾಯಿತು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸುದೀರ್ಘ ಮತ್ತು ಕಷ್ಟಕರ ಪ್ರಯಾಣದ ಬಳಿಕ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾನಸಿ ಅವರನ್ನು ಕುಟುಂಬಸ್ಥರು ಭಾಷ್ಪಾಂಜಲಿಯೊಂದಿಗೆ ಬರಮಾಡಿಕೊಂಡರು. ತಮ್ಮ ಮಗಳನ್ನು ಬಿಗಿಯಪ್ಪಿ ನಟಿ ಕಣ್ಣೀರಿಟ್ಟ ದೃಶ್ಯ ಹಾಗೂ ಪತಿ, ಖ್ಯಾತ ಗಾಯಕ ಪಾರ್ಥಿವ್ ಗೋಹಿಲ್ ಅವರನ್ನು ಅಪ್ಪಿಕೊಂಡ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿರುವ ಅವರು, ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಚುಂಬಕ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular