HomeKarnatakaಕೆ-ಟಿಇಟಿ ಫಲಿತಾಂಶ ಪ್ರಕಟ: ಶಿಕ್ಷಕರ ನೇಮಕಾತಿಗೆ 64,830 ಅಭ್ಯರ್ಥಿಗಳ ಅರ್ಹತೆ

ಕೆ-ಟಿಇಟಿ ಫಲಿತಾಂಶ ಪ್ರಕಟ: ಶಿಕ್ಷಕರ ನೇಮಕಾತಿಗೆ 64,830 ಅಭ್ಯರ್ಥಿಗಳ ಅರ್ಹತೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ನಡೆಸಿದ 2023 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆ-ಟಿಇಟಿ) ಫಲಿತಾಂಶ ಪ್ರಕಟಿಸಲಾಗಿದೆ.

ಪತ್ರಿಕೆ 1 ಮತ್ತು ಪತ್ರಿಕೆ 2ಕ್ಕೆ ಹಾಜರಾದ ಒಟ್ಟು 3,01,962 ಅಭ್ಯರ್ಥಿಗಳಲ್ಲಿ 64,830 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಈ ಅಭ್ಯರ್ಥಿಗಳು ಸರ್ಕಾರ ಶಿಕ್ಷಕರ ನೇಮಕಾತಿಗೆ ಮುಂದೆ ನಡೆಸಲಿರುವ ಸಿಇಟಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದರಿಂದ ಐದನೇ ತರಗತಿವರೆಗೆ ಬೋಧನಾ ಅರ್ಹತೆಗೆ ನಡೆಸಲಾದ ಪರೀಕ್ಷೆಗೆ ಹಾಜರಾಗಿದ್ದ 1,27,131 ಮಂದಿಯಲ್ಲಿ 14,922 ಜನ ಉತ್ತೀರ್ಣರಾಗಿದ್ದಾರೆ.

ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯ https://school education.karnataka.gov.in ವೆಬ್ಸೈಟ್ ನಲ್ಲಿ ಗಮನಿಸಬಹುದಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular