HomeKarnatakaBREAKING : ನಾಳೆಯಿಂದ 'K-SET' ದಾಖಲೆ ಪರಿಶೀಲನೆ ಆರಂಭ : 'KEA' ಯಿಂದ ವೇಳಾಪಟ್ಟಿ ಬಿಡುಗಡೆ...

BREAKING : ನಾಳೆಯಿಂದ ‘K-SET’ ದಾಖಲೆ ಪರಿಶೀಲನೆ ಆರಂಭ : ‘KEA’ ಯಿಂದ ವೇಳಾಪಟ್ಟಿ ಬಿಡುಗಡೆ !

ಬೆಂಗಳೂರು :   ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ KEA ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳ ಪರಿಶೀಲನೆಗೆ ಬರಬೇಕು ಎಂದು ಕರ್ನಾಟಕ ಪರೀಕ್ಷಾ  ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ KEA ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳ ಪರಿಶೀಲನೆಗೆ ಬರಬೇಕು. ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯೆರ್ಥಿಗಳ ದಾಖಲೆ ಪರಿಶೀಲನೆ ಡಿ.8 ಮತ್ತು 9 ರಂದು ನಡೆಸಲಾಗುತ್ತದೆ. ಆ ದಿನಗಳಂದು ಪರಿಶಿಷ್ಟ ಜಾತಿಯ ಎ, ಬಿ, ಸಿ ಪ್ರವರ್ಗಗಳ ಅಭ್ಯರ್ಥಿಗಳು ಕೂಡ ಮೂಲ ದಾಖಲೆ ಸಮೇತ ಬರಬಹುದು. ಶೈಕ್ಷಣಿಕ ಮೂಲ ದಾಖಲೆಗಳ ಜತೆಗೆ ಕ್ಲೇಮ್ ಮಾಡಿರುವುದಕ್ಕೆ ಪೂರಕವಾದ ಮೂಲ ದಾಖಲೆಗಳ ಸಮೇತ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸ್ನಾತಕೋತ್ತರ ಪದವಿ ಅಪೂರ್ಣ ಆಗಿರುವವರು ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ. ಹೆಚ್ಚಿನ‌ ಮಾಹಿತಿ ಹಾಗೂ ವೇಳಾಪಟ್ಟಿ ಸಲುವಾಗಿ ಈ ಕೆಳಗಿನ‌ ಲಿಂಕ್ ಮೇಲೆ‌ ಕ್ಲಿಕ್‌ ಮಾಡಿ ಎಂದು ಪ್ರಕಟಣೆ ಹೊರಡಿಸಿದೆ.


20251127202802_mergedkannada.pdf https://share.google/3vNxH8gTBGHg96c0X

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular