HomeKarnatakaಬೆಂಗಳೂರು–ಹೊಸೂರು ರೈಲು ಮಾರ್ಗ ದ್ವಿಪಥಿಕರಣ ಕಾಮಗಾರಿಯಲ್ಲಿ ಕೆ-ರೈಡ್ ಮಹತ್ವದ ಸಾಧನೆ

ಬೆಂಗಳೂರು–ಹೊಸೂರು ರೈಲು ಮಾರ್ಗ ದ್ವಿಪಥಿಕರಣ ಕಾಮಗಾರಿಯಲ್ಲಿ ಕೆ-ರೈಡ್ ಮಹತ್ವದ ಸಾಧನೆ

ಬೆಂಗಳೂರು, ಅಕ್ಟೋಬರ್ 28*: ಬೆಂಗಳೂರು–ಹೊಸೂರು ನಡುವಿನ 48 ಕಿ.ಮೀ. ರೈಲು ಮಾರ್ಗ ದ್ವಿಪಥಿಕರಣ ಕಾಮಗಾರಿಯಲ್ಲಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮಹತ್ವದ ಸಾಧನೆ ಮಾಡಿದೆ. ಚಂದಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–44ರ ಮೇಲಿನ ರೈಲ್ವೆ ಸೇತುವೆಗೆ ತಲಾ 61 ಮೀಟರ್ ಉದ್ದದ ಎರಡು ಬೃಹತ್ ಉಕ್ಕಿನ ಗರ್ಡರ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ತಲಾ 245 ಮೆಟ್ರಿಕ್ ಟನ್ ತೂಕದ ಈ ಗರ್ಡರ್‌ಗಳಲ್ಲಿ ಮೊದಲನೆಯದನ್ನು ಅಕ್ಟೋಬರ್ 10ರಂದು ಹಾಗೂ ಎರಡನೆಯದನ್ನು ಅಕ್ಟೋಬರ್ 28ರಂದು ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ರೈಲು ಮಾರ್ಗ ದ್ವಿಪಥಿಕರಣ ಯೋಜನೆಗಾಗಿ ಕೆ-ರೈಡ್ ಅಳವಡಿಸಿರುವ ಅತ್ಯಂತ ಉದ್ದದ ಗರ್ಡರ್‌ಗಳು ಇವಾಗಿವೆ.

ವಿಶೇಷ ವಿಂಚ್ ತಂತ್ರಜ್ಞಾನ ಬಳಸಿ, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಹೆದ್ದಾರಿ ಸಂಚಾರಕ್ಕೆ ಕನಿಷ್ಠ ಅಡಚಣೆಯಾಗುವಂತೆ ಈ ಸಂಕೀರ್ಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆದ್ದಾರಿ ಸಂಚಾರಕ್ಕೆ ಅನುಕೂಲ

*ಹೆದ್ದಾರಿ ಸಂಚಾರಕ್ಕೆ ಅನುಕೂಲ*

ಹೊಸ ಸೇತುವೆಯ ವಿಶೇಷತೆಯೆಂದರೆ, ಹೆದ್ದಾರಿಯ ಮಧ್ಯಭಾಗದಲ್ಲಿ ಹೆಚ್ಚುವರಿ ಆಧಾರಸ್ತಂಭದ ಅಗತ್ಯವಿಲ್ಲ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ.

ಉಳಿದ ರೈಲ್ವೆ ಕಾಮಗಾರಿಗಳು ಹಾಗೂ ಹೆದ್ದಾರಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ, ರಾಷ್ಟ್ರೀಯ ಹೆದ್ದಾರಿ–44ರ ಉದ್ದೇಶಿತ 12 ಪಥಗಳ ವಿಸ್ತರಣೆಗೆ ಈ ಸೇತುವೆ ಪೂರಕವಾಗಲಿದೆ. ಇದರಿಂದ ಬೆಂಗಳೂರು–ಹೊಸೂರು ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ, ಪ್ರಯಾಣಿಕರು ಹಾಗೂ ಸರಕು ಸಾಗಣೆ ವಾಹನಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಕೆ-ರೈಡ್/ಬಿ-ರೈಡ್ ಯೋಜನೆ ಯೋಜನೆ

*ಕೆ-ರೈಡ್/ಬಿ-ರೈಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಲಕ್ಷ್ಮಣ್ ಸಿಂಗ್* ಮಾತನಾಡಿ, “ಎರಡು ಬೃಹತ್ ಗರ್ಡರ್‌ಗಳ ಯಶಸ್ವಿ ಅಳವಡಿಕೆ ಬೆಂಗಳೂರು–ಹೊಸೂರು ರೈಲು ಮಾರ್ಗ ದ್ವಿಪಥ ಯೋಜನೆಯ ಮಹತ್ವದ ಮೈಲಿಗಲ್ಲಾಗಿದೆ. ಈ ಸೇತುವೆಯಿಂದ ಹೆದ್ದಾರಿ ಸಂಚಾರ ಸುಗಮವಾಗುವುದರ ಜೊತೆಗೆ ರೈಲು ಸಂಚಾರದ ಸಾಮರ್ಥ್ಯವೂ ಹೆಚ್ಚಲಿದೆ. ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿಗೆ ಕೆ-ರೈಡ್ ಬದ್ಧವಾಗಿದೆ,” ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular