ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮೇ ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎನ್.ರಾಜಣ್ಣ ನಾಅಯಕತ್ವ ಬದಲಾವಣೆಗೆ ಹೊಸ ಮುಹೂರ್ತವಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ರಾಜಕಾರಣ ನಿಂತ ನೀರಲ್ಲ. ಅದು ಪರಿಶುದ್ಧವಾಗಿರಬೇಕೆಂದರೆ ಹರಿವಿಯುತ್ತಿರಬೇಕು. ಮೇ ತಿಂಗಳಲ್ಲಿ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಲ್ಲ, ಅವರಿಗೂ ಶಕ್ತಿಯಿದೆ. ಆದರೆ ಸಿದ್ದರಾಮಯ್ಯ ಇಷ್ಟೊಂದು ಅಸಹಾಯಕರಾಗಿದ್ದಾರೆ ಎಂದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರೇನೋ ಎಂದು ಯೋಚಿಸುತ್ತಿದ್ದೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಯಾವತ್ತೂ ಇಷ್ಟೊಂದು ಅಸಹಾಯಕರಲ್ಲ. ಅವರು ಅಸಹಾಯಕರಾಗಿದ್ದಾರೆ ಎಂಬ ಮಾತುಗಳು ಕೇಳಿದಾಗ ಯಾರಾದರೂ ಸಿದ್ದರಾಮಯ್ಯನವರಿಗೆ ಮಾಟ-ಮಂತ್ರ ಮಾಡಿಸಿದರಾ ಎಂದು ಯೋಚಿಸುವಂತಾಗಿದೆ. ಮನುಷ್ಯನ ಪ್ರಭಾವ ಬೀರಿರಬೇಕು ಅಂದ್ರೆ ಆಸ್ತಿಕರಾಗಿರಬೇಕು ಅಂತಲ್ಲ. ಮಾಟ ಮಾಡಿಸಿದ್ದಾರೋ ಇಲ್ವೋ ಗೊತ್ತಿಲ್ಲ. ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದರು.
ನನ್ನನ್ನು ಸಿಎಂ ಸಿದ್ದರಾಮಯ್ಯ ಕರೆದು ಮಾತನಾಡಿಸಿದ್ರು. ನಾನು ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ-ಮಂತ್ರ ನಂಬಲ್ಲ. ಗಟ್ಟಿಯಾಗಿ ನಿಲ್ಲಿ ಎಂದು ಹೇಳಿಸಿಕೊಳ್ಳುವಷ್ಟು ಸಿದ್ದರಾಮಯ್ಯ ಅಸಾಹಯಕರಲ್ಲ. ಮಾಟ-ಮಂತ್ರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಹಾಗಾಗಿ ನಾನೂ ಹೇಳ್ತಿದ್ದೇನೆ. ನನ್ನ ಮೇಲೂ ಮಾಟ-ಮಂತ್ರ ಆಗಿರುತ್ತೆ ಅಂತಾ ಹೇಳಲು ಸಾಧ್ಯವಿಲ್ಲ. ನಮ್ಮ ಹಳೆ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ರು. ಕೇರಳದಲ್ಲಿ ಮಾಟ-ಮಂತ್ರ ಮಾಡಿಸುತ್ತಾರೆ ಎಂದಿದ್ದಾರೆ ಶಾಸಕ ರಾಜಣ್ಣ.

