HomeIndiaಸಿನಿಮಾವನ್ನೇ ಮೀರಿಸಿದ ಟ್ವಿಸ್ಟ್ ; ಮದುವೆ ಬಳಿಕ ಪತಿ 'ಜಾನಿ’ ಅಲ್ಲ 'ಜಾವೇದ್' ಎಂದು ತಿಳಿದು...

ಸಿನಿಮಾವನ್ನೇ ಮೀರಿಸಿದ ಟ್ವಿಸ್ಟ್ ; ಮದುವೆ ಬಳಿಕ ಪತಿ ‘ಜಾನಿ’ ಅಲ್ಲ ‘ಜಾವೇದ್’ ಎಂದು ತಿಳಿದು ಪತ್ನಿಗೆ ಶಾಕ್!

ಹರಿಯಾಣದ ಸೋನಿಪತ್‌ನಲ್ಲಿ ಸಿನಿಮಾವನ್ನೇ ಮೀರಿಸುವ ಘಟನೆ ನಡೆದಿದೆ .ಇನ್‌ಸ್ಟಾಗ್ರಾಂ ಮೂಲಕ ‘ಜಾನಿ’ ಹೆಸರಿನಲ್ಲಿ ಪರಿಚಯವಾಗಿ, ತಾನು ಹಿಂದೂ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಆದರೆ ಪತಿಯ ಬ್ಯಾಗ್‌ನಲ್ಲಿದ್ದ ID ಕಾರ್ಡ್ ನೋಡಿದ ಬಳಿಕ ಆತನ ಅಸಲಿ ಹೆಸರು ಜಾವೇದ್ ಖಾನ್ ಎಂಬುದು ಬೆಳಕಿಗೆ ಬಂದಿದೆ ಎಂದು ಯುವತಿ ಆರೋಪಿಸಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಬಂದ ಸಾಮಾನ್ಯವೊಂದು ‘ಫ್ರೆಂಡ್ ರಿಕ್ವೆಸ್ಟ್’ ತನ್ನ ಜೀವನವನ್ನೇ ಹೀಗೆ ತಲೆಕೆಳಗಾಗಿಸುತ್ತದೆ ಎಂದು ಆ ಯುವತಿ ಕನಸಿನಲ್ಲೂ ಊಹಿಸಿರಲಿಲ್ಲ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಹರಿಯಾಣದ ಸೋನಿಪತ್ ಪ್ರದೇಶದ ಈ ಯುವತಿಗೆ ಕೆಲ ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಆತ ತನ್ನ ಹೆಸರು ‘ಜಾನಿ’ ಎಂದು ಹೇಳಿಕೊಂಡಿದ್ದಲ್ಲದೆ, ತಾನು ಹಿಂದೂ ಎಂದು ಪರಿಚಯಿಸಿಕೊಂಡಿದ್ದ.

ಕೆಲವೇ ದಿನಗಳಲ್ಲಿ ಈ ಪರಿಚಯ ಪ್ರೀತಿಗೆ ತಿರುಗಿದ್ದು, ಬಳಿಕ ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯಾದ ನಂತರ ನವದಂಪತಿ ಜೀವನ ಆರಂಭಿಸಿದ್ದರು.

ಆದರೆ ಒಂದು ದಿನ ಪತಿಯ ಬ್ಯಾಗ್ ಪರಿಶೀಲಿಸುತ್ತಿದ್ದಾಗ ಯುವತಿಗೆ ಆತನ ಗುರುತಿನ ಚೀಟಿ (ID ಕಾರ್ಡ್) ಸಿಕ್ಕಿದೆ. ಅದರಲ್ಲಿ ‘ಜಾನಿ’ ಎಂಬ ಹೆಸರಿನ ಬದಲು ‘ಜಾವೇದ್ ಖಾನ್’ ಎಂಬ ಹೆಸರು ಕಂಡುಬಂದಿದೆ. ಇದರಿಂದ ಆಘಾತಕ್ಕೊಳಗಾದ ಯುವತಿ ವಿಚಾರಣೆ ನಡೆಸಿದಾಗ, ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿ ಮುಸ್ಲಿಂ ಎಂಬುದು ಹಾಗೂ ನಕಲಿ ಗುರುತಿನ ಮೂಲಕ ತನ್ನನ್ನು ನಂಬಿಸಿ ಮದುವೆಯಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ ಎಂದು ಆರೋಪಿಸಲಾಗಿದೆ.

ಇಷ್ಟಕ್ಕೆ ಈ ಕಥೆ ಮುಗಿದಿಲ್ಲ. ಒಂದು ದಿನ ದಂಪತಿ ವಾಸಿಸುತ್ತಿದ್ದ ಮನೆಗೆ ಮಹಿಳೆಯೊಬ್ಬರು ಏಕಾಏಕಿ ಬಂದಿದ್ದಾರೆ. ಆಕೆ ಜಾವೇದ್‌ನ ಮೊದಲ ಪತ್ನಿ ಎಂದು ತಿಳಿದುಬಂದಿದೆ. ಜಾವೇದ್‌ಗೆ ಸುಮಾರು 12 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ ಎಂಬ ವಿಷಯವೂ ಈ ವೇಳೆ ಬಹಿರಂಗವಾಗಿದೆ. ಬಳಿಕ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದ್ದು, ಮೊದಲ ಪತ್ನಿ ಜಾವೇದ್‌ನನ್ನು ತನ್ನೊಂದಿಗೆ ಕರೆದೊಯ್ದಿದ್ದಾಳೆ ಎನ್ನಲಾಗಿದೆ.

ಆದರೂ ಕೆಲ ದಿನಗಳ ಬಳಿಕ ಮತ್ತೆ ಯುವತಿಯ ಬಳಿಗೆ ಬಂದ ಜಾವೇದ್, ತಮ್ಮಿಬ್ಬರನ್ನು ಬೇರ್ಪಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ನಂಬಿಸಿ, ಆಕೆಯನ್ನು ಉತ್ತರ ಪ್ರದೇಶದ ಬುಧಾನಾ ಪ್ರದೇಶಕ್ಕೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲಿಂದ ಸೋನಿಪತ್‌ಗೆ ವಾಪಸ್ ಬಂದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜಾವೇದ್ ಹಾಗೂ ಆತನ ಕುಟುಂಬ ಸದಸ್ಯರು ಯುವತಿಯನ್ನು ಬಲವಂತವಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಮತಾಂತರಕ್ಕೆ ಯುವತಿ ನಿರಾಕರಿಸಿದಾಗ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಳೆದ ಒಂದು ವಾರದಿಂದ ಜಾವೇದ್ ಹಾಗೂ ಆತನ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಪೊಲೀಸ್ ಠಾಣೆಗೆ ತೆರಳಿ ತನ್ನ ಮೇಲೆ ನಡೆದಿರುವ ಕೃತ್ಯಗಳ ಕುರಿತು ದೂರು ನೀಡಿದ್ದಾರೆ. ಆಕೆಗೆ ಬೆಂಬಲವಾಗಿ ಸ್ಥಳೀಯ ಸಂಘಟನೆಗಳೂ ಧ್ವನಿ ಎತ್ತಿವೆ.

ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಕಲಿ ಗುರುತಿನ ಮೂಲಕ ಯುವತಿಯನ್ನು ನಂಬಿಸಿ ಮದುವೆಯಾಗಿದ್ದಾನೆ ಎನ್ನಲಾದ ಜಾವೇದ್ ಖಾನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular