HomeKarnatakaಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗ ಜಲಪಾತ ವೀಕ್ಷಣೆಗೆ ವಾರಾಂತ್ಯದಲ್ಲಿ KSRTCಯಿಂದ ವಿಶೇಷ ಬಸ್ ಸೌಲಭ್ಯ

ಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗ ಜಲಪಾತ ವೀಕ್ಷಣೆಗೆ ವಾರಾಂತ್ಯದಲ್ಲಿ KSRTCಯಿಂದ ವಿಶೇಷ ಬಸ್ ಸೌಲಭ್ಯ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ಬೋರ್ಗರೆದು ಹರಿಯುತ್ತಿದ್ದು, ಜಲಪಾತದ ನಯನಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಜೋಗಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಸುಮಾರು 830 ಅಡಿ (253 ಮೀಟರ್) ಎತ್ತರ ಹೊಂದಿರುವ ಈ ಫಾಲ್ಸ್​ ನೋಡಲು ಮಳೆಗಾಲದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇದೇ ಕಾರಣಕ್ಕೆ ಪ್ರವಾಸಿಗರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಶಿವಮೊಗ್ಗ ವಿಭಾಗವು ವಿಶೇಷ ವೀಕೆಂಡ್ ಪ್ಯಾಕೇಜ್ ಬಸ್ ಸೇವೆ ಆರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ವಾರಾಂತ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಜೋಗ ಜಲಪಾತಕ್ಕೆ ತೆರಳಿದೆ. ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಹೊರಡುವ ಬಸ್, ಸಿಗಂದೂರು, ವರದಾಮೂಲ, ಇಕ್ಕೇರಿ ಹಾಗೂ ಕೇಳದಿ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಜೋಗ ಜಲಪಾತ ತಲುಪಲಿದೆ. ಜೋಗ ಜಲಪಾತದಿಂದ ಸಂಜೆ 5 ಗಂಟೆಗೆ ಹೊರಡುವ ಬಸ್, ರಾತ್ರಿ 7.30ಕ್ಕೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಲಿ

ಈ ವಿಶೇಷ ಪ್ಯಾಕೇಜ್‌ಗೆ ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 250 ರೂ. ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆ.ಎಸ್‌.ಆರ್‌.ಟಿ.ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದು. ಈ ವಿಶೇಷ ಸೇವೆ ಈ ವಾರಾಂತ್ಯದಿಂದ ಆರಂಭವಾಗಲಿದೆ ಎಂದು ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ಸಂಚಾರಾಧಿಕಾರಿ ದಿನೇಶ್ ಚನ್ನಗಿರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular